ಆಸ್ಪತ್ರೆಯಿಂದ ಕದ್ದ ಕೊರೊನಾ ಲಸಿಕೆಯನ್ನು ವಾಪಾಸ್ ತಂದಿಟ್ಟು ಕ್ಷಮೆಯಾಚಿಸಿದ ಕಳ್ಳ - BC Suddi
ಆಸ್ಪತ್ರೆಯಿಂದ ಕದ್ದ ಕೊರೊನಾ ಲಸಿಕೆಯನ್ನು ವಾಪಾಸ್ ತಂದಿಟ್ಟು ಕ್ಷಮೆಯಾಚಿಸಿದ ಕಳ್ಳ

ಆಸ್ಪತ್ರೆಯಿಂದ ಕದ್ದ ಕೊರೊನಾ ಲಸಿಕೆಯನ್ನು ವಾಪಾಸ್ ತಂದಿಟ್ಟು ಕ್ಷಮೆಯಾಚಿಸಿದ ಕಳ್ಳ

ಹರಿಯಾಣ:ಆಸ್ಪತ್ರೆಯಿಂದ ಕದ್ದಿದ್ದ ಬಾಕ್ಸ್​ನಲ್ಲಿ ಕೊರೊನಾ ವ್ಯಾಕ್ಸಿನ್​ ಇದ್ದಿದ್ದನ್ನು ಕಂಡ ಕಳ್ಳರು ಬಾಕ್ಸನ್ನು ಪೊಲೀಸ್​ ಠಾಣೆಯ ಬಳಿ ಬಿಟ್ಟು ಹೋಗಿ ಜೊತೆಗೊಂದು ಪತ್ರವನ್ನೂ ಬರೆದು ನಮ್ಮನ್ನು ಕ್ಷಮಿಸಿ. ಬಾಕ್ಸ್​​ನಲ್ಲಿ ವ್ಯಾಕ್ಸಿನ್​ ಇದೆ ಎಂದು ತಿಳಿಯದೇ ಕದ್ದಿದ್ದಕ್ಕೆ ಕ್ಷಮೆ ಇರಲಿ ಎಂದು ಬರೆದ ಮೂಲಕ ಕಳ್ಳನೊಬ್ಬ ಪೊಲೀಸರ ಮನಗೆದ್ದಿದ್ದಾರೆ.

ಬುಧವಾರ ರಾತ್ರಿ ಜಿಂದ್​ ಜಿಲ್ಲೆಯ ಆಸ್ಪತ್ರೆಗೆ ನುಗ್ಗಿದ್ದ ಕಳ್ಳರು ಸ್ಟೋರ್​ ರೂಂನಲ್ಲಿ ಕೈಗೆ ಸಿಕ್ಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು, ಬಳಿಕ ಆಸ್ಪತ್ರೆಯ ಹೆಡ್​​ ನರ್ಸ್​ ಬಂದು ನೋಡುವಷ್ಟರಲ್ಲಿ ಔಷಧಿ ದಾಸ್ತಾನು ಕೊಠಡಿಯ ಬೀಗ ಮುರಿದಿದ್ದು, ಒಳಗೆ ಪರಿಶೀಲಿಸಿದಾಗ ವ್ಯಾಕ್ಸಿನ್​ ಇದ್ದ ಬಾಕ್ಸ್​ ಕಣ್ಮರೆಯಾಗಿತ್ತು. ವ್ಯಾಕ್ಸಿನ್​ ಕಳವಿನಿಂದ ಜಿಲ್ಲೆಯಲ್ಲಿ ವಿತರಿಸಲು ಲಸಿಕೆ ಇಲ್ಲದಂತಾಗಿದ್ದು ಈ ಬಗ್ಗೆ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು.

2 ದಿನಗಳ ನಂತರ ಆಸ್ಪತ್ರೆಯಲ್ಲಿ ಕಳುವಾಗಿದ್ದ ಲಸಿಕೆಗಳಿದ್ದ ಬಾಕ್ಸ್​​ ಸ್ಥಳೀಯ ಪೊಲೀಸ್​ ಠಾಣೆಯ ಬಳಿ ಪತ್ತೆಯಾಗಿದ್ದು, ಬಾಕ್ಸ್​ನಲ್ಲಿ 182 ವೈಯಲ್ಸ್​ ಕೋವಿಶೀಲ್ಡ್​ ಹಾಗೂ 440 ಡೋಸೇಜ್​ ಕೊವ್ಯಾಕ್ಸಿನ್​ ಲಸಿಕೆ ಹಾಗೆಯೇ ಇದ್ದವು. ಬಾಕ್ಸ್​ ಜೊತೆ ಕಳ್ಳರು ಬರೆದಿದ್ದ ಪತ್ರವೂ ಸಿಕ್ಕಿದ್ದು ಗೊತ್ತಿಲ್ಲದೇ ನಾವು ವ್ಯಾಕ್ಸಿನ್​ ಇದ್ದ ಬಾಕ್ಸನ್ನು ಕದ್ದಿದ್ದೇವೆ. ಹೀಗಾಗಿ ಬಾಕ್ಸನ್ನು ಹಿಂತಿರುಗಿಸುತ್ತಿದ್ದೇವೆ. ಕ್ಷಮೆ ಇರಲಿ ಎಂದು ಹಿಂದಿಯಲ್ಲಿ ಬರೆದಿದ್ದಾರೆ.

ಇನ್ನು ಪೊಲೀಸ್​ ಠಾಣೆಯ ಟೀ ಅಂಗಡಿ ಬಳಿ ವ್ಯಾಕ್ಸಿನ್​ ಬಾಕ್ಸ್​ ಇಟ್ಟು ಹೋದ ಕಳ್ಳರಿಗಾಗಿ ಹುಡುಕಾಟ ನಡೆಸಲಾಗಿದ್ದು, ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಕಳ್ಳರು ಬಾಕ್ಸನ್ನು ತಂದಿಟ್ಟಿರುವುದು ಗೊತ್ತಾಗಿದೆ.