ಇನ್ನೊಮ್ಮೆ ರಾಷ್ಟ್ರವ್ಯಾಪಿ ಲಾಕ್​ಡೌನ್ ಮಾಡುವ ಯೋಜನೆ ಇಲ್ಲ:ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ: ನಿರ್ಮಲಾ ಸೀತಾರಾಮನ್ - BC Suddi
ಇನ್ನೊಮ್ಮೆ ರಾಷ್ಟ್ರವ್ಯಾಪಿ ಲಾಕ್​ಡೌನ್ ಮಾಡುವ ಯೋಜನೆ ಇಲ್ಲ:ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ:  ನಿರ್ಮಲಾ ಸೀತಾರಾಮನ್

ಇನ್ನೊಮ್ಮೆ ರಾಷ್ಟ್ರವ್ಯಾಪಿ ಲಾಕ್​ಡೌನ್ ಮಾಡುವ ಯೋಜನೆ ಇಲ್ಲ:ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ: ನಿರ್ಮಲಾ ಸೀತಾರಾಮನ್

ದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರು, ಇನ್ನೊಮ್ಮೆ ರಾಷ್ಟ್ರವ್ಯಾಪಿ ಲಾಕ್​ಡೌನ್ ಮಾಡುವ ಯೋಜನೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, “ರಾಷ್ಟ್ರವ್ಯಾಪಿ ಸಂಪೂರ್ಣ ಲಾಕ್​ಡೌನ್ ಮಾಡುವುದಿಲ್ಲ, ಅದರ ಬದಲಿಗೆ ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶವನ್ನು ಗುರುತಿಸಿ ಕಂಟೈನ್​ಮೆಂಟ್ ವಲಯಗಳನ್ನಾಗಿ ಗುರುತಿಸಲಾಗುವುದು. ಅಲ್ಲಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ, ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ” ಎನ್ನಲಾಗಿದೆ.

ಇನ್ನು ನಿರ್ಮಲಾ ಸೀತಾರಾಮನ್​ ಅವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಧ್ಯಕ್ಷ ಅನಿಮೇಶ್​ ಸಕ್ಸೇನಾರೊಂದಿಗೆ ಮಾತುಕತೆ ನಡೆಸಿದ್ದು, ರಾಷ್ಟ್ರಾದ್ಯಂತ ಮತ್ತೆ ಲಾಕ್​ಡೌನ್ ಜಾರಿ ಮಾಡುವ ಯೋಜನೆ ಇಲ್ಲ ಎಂದು ಉದ್ಯಮ ಕ್ಷೇತ್ರಕ್ಕೆ ಭರವಸೆ ನೀಡಿದ್ದಾರೆ.

ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಸಣ್ಣ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆತಂಕ ಶುರುವಾಗಿದ್ದು, ಮತ್ತೆ ಲಾಕ್​ಡೌನ್​ ಆದರೆ ಪರಿಸ್ಥಿತಿ ಏನೆಂಬ ಭಯ ಹುಟ್ಟಿದೆ. ಅವರಲ್ಲಿನ ಆತಂಕ ದೂರ ಮಾಡುವ ಸಲುವಾಗಿ ರವಿವಾರ ನಿರ್ಮಲಾ ಸೀತಾರಾಮನ್​ ಈ ಕರೆ ಮಾಡಿದ್ದಾರೆ.

ಮಹಿಳೆಯೊಬ್ಬರಿಗೆ ಆಸ್ಪತ್ರೆಯ ಐಸಿಯುನಲ್ಲಿ ಹಾಸಿಗೆ ಸಿಗದ ಕಾರಣ: ಆರು ಗಂಟೆಗಳ ಕಾಲ ಆಟೋ ರಿಕ್ಷಾದಲ್ಲಿ ಆಮ್ಲಜನಕ ಸಿಲಿಂಡರ್‌ನೊಂದಿಗೆ ಕಾಲಕಳೆದ ಮಹಿಳೆ