'ಕೊರೊನಾ ವೇಳೆ ವಾರ್ಷಿಕ ಕುಂಭಮೇಳ ಸಾಂಕೇತಿಕವಾಗಿ ನಡೆಯಬೇಕು' : ಅವಧೇಶಾನಂದ ಸ್ವಾಮೀಜಿಗೆ ಪ್ರಧಾನಿ ಮನವಿ - BC Suddi
‘ಕೊರೊನಾ ವೇಳೆ ವಾರ್ಷಿಕ ಕುಂಭಮೇಳ ಸಾಂಕೇತಿಕವಾಗಿ ನಡೆಯಬೇಕು’ : ಅವಧೇಶಾನಂದ ಸ್ವಾಮೀಜಿಗೆ ಪ್ರಧಾನಿ ಮನವಿ

‘ಕೊರೊನಾ ವೇಳೆ ವಾರ್ಷಿಕ ಕುಂಭಮೇಳ ಸಾಂಕೇತಿಕವಾಗಿ ನಡೆಯಬೇಕು’ : ಅವಧೇಶಾನಂದ ಸ್ವಾಮೀಜಿಗೆ ಪ್ರಧಾನಿ ಮನವಿ

ನವದೆಹಲಿ: “ವಾರ್ಷಿಕ ಕುಂಭಮೇಳವು ಕೊರೊನಾ ಸಂದರ್ಭ ಸಾಂಕೇತಿಕವಾಗಿ ನಡೆಯಬೇಕು. ಇದು ಕೊರೊನಾ ಬಿಕ್ಕಟ್ಟಿನ ಹೋರಾಟಕ್ಕೆ ಬಲ ನೀಡುತ್ತದೆ” ಎಂದಿದ್ದಾರೆ. ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಕೊರೊನಾ ಹಾಟ್‌ಸ್ಪಾಟ್‌ ಆಗಿ ಬದಲಾಗಿದೆ ಎನ್ನುವ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳದ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ನಲ್ಲಿ ತಿಳಿಸಿರುವ ಪ್ರಧಾನಿ ಮೋದಿ, “ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿ ಜೀ ಅವರ ಜೊತೆ ಫೋನ್‌ ಮೂಲಕ ಸಂಭಾಷಣೆ ನಡೆಸಿದ್ದೇನೆ. ಈ ಸಂದರ್ಭ ಎಲ್ಲಾ ಸಂತರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ. ಎಲ್ಲಾ ಸಂತರು ಆಡಳಿತಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದಾರೆ. ಇದಕ್ಕೆ ನಾನು ಸಂತರಿಗೆ ಧನ್ಯವಾದ ತಿಳಿಸುತ್ತೇನೆ” ಎಂದಿದ್ದಾರೆ.

“ಈಗಾಗಲೇ ಎರಡು ಸಾಹಿ ಸ್ನಾನಗಳು ನಡೆದಿವೆ. ಕೊರೊನಾ ಬಿಕ್ಕಟ್ಟಿನಿಂದಾಗಿ ಕುಂಭಮೇಳವನ್ನು ಸಾಂಕೇತಿಕವಾಗಿ ನಡೆಸಬೇಕು. ಇದು ಕೊರೊನಾ ಬಿಕ್ಕಟ್ಟಿನ ಹೋರಾಟಕ್ಕೆ ಬಲ ನೀಡುತ್ತದೆ ಎಂದು ಮನವಿ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ.

ಕುಂಭಮೇಳದ ಬಗ್ಗೆ ಪ್ರಧಾನಿ ಮೋದಿ ಅವರು ಮಾಡಿರುವ ಮನವಿಗೆ ಪ್ರತಿಕ್ರಿಯೆ ನೀಡಿದ ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿ ಜೀ ಅವರು, “ಪ್ರಧಾನಿ ಮೋದಿ ಅವರ ಮನವಿಯನ್ನು ನಾವು ಗೌರವಿಸುತ್ತೇವೆ. ಕೊರೊನಾದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾಹಿ ಸ್ನಾನಕ್ಕೆ ಬಾರದಂತೆ ನಾನು ವಿನಂತಿಸುತ್ತೇನೆ ಹಾಗೂ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ತಿಳಿಸುತ್ತೇನೆ” ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳ ಕೊರೊನಾ ಹಾಟ್‌ಸ್ಪಾಟ್‌ ಆಗಿ ಬದಲಾಗಿದೆ ಎನ್ನುವ ಆರೋಪವಿದೆ. ಹರಿದ್ವಾರಕ್ಕೆ ಕಳೆದ ಕೆಲವು ದಿನಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಿದ್ದು, ಸಾಹಿ ಸ್ನಾನದಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಹಿರಿಯ ಸಾಧು-ಸಂತರಿಗೆ ಕೊರೊನ ದೃಢಪಟ್ಟಿದೆ. ಎಪ್ರಿಲ್‌ 10-14ರವರೆಗೆ ಒಟ್ಟು 1,701 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಸೋಂಕಿಗೆ ಈಗಾಗಲೇ ಓರ್ವ ಸಾಧು ಸಾವನ್ನಪ್ಪಿದ್ದಾರೆ.

ಬೆಳಗಾವಿ : ತಮ್ಮ ಹಕ್ಕು ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ