ಸಿಂಗಮ್ ಅಂತ ಕರೆಸಿಕೊಂಡ ಅಣ್ಣಾಮಲೈ ನಾಮಪತ್ರಕ್ಕೆ  ಚುನಾವಣಾ ಆಯೋಗ ತಡೆ.! - BC Suddi
ಸಿಂಗಮ್ ಅಂತ ಕರೆಸಿಕೊಂಡ ಅಣ್ಣಾಮಲೈ ನಾಮಪತ್ರಕ್ಕೆ  ಚುನಾವಣಾ ಆಯೋಗ ತಡೆ.!

ಸಿಂಗಮ್ ಅಂತ ಕರೆಸಿಕೊಂಡ ಅಣ್ಣಾಮಲೈ ನಾಮಪತ್ರಕ್ಕೆ  ಚುನಾವಣಾ ಆಯೋಗ ತಡೆ.!

 

ಚೆನ್ನೈ: ಬಿಜೆಪಿ ಅಭ್ಯರ್ಥಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಮಿಳುನಾಡಿನ ಅರವಕುರಚಿ ಕ್ಷೇತ್ರದಲ್ಲಿ ಸಲ್ಲಿಸಿದ ನಾಮಪತ್ರಕ್ಕೆ  ಚುನಾವಣಾ ಆಯೋಗ ತಡೆ ನೀಡಿದೆ.

ನಾಮಪತ್ರದಲ್ಲಿ ಅಪರಾಧ ಪ್ರಕರಣಗಳ ಬಗ್ಗೆ ಉಲ್ಲೇಖಿಸಿಲ್ಲವೆಂಬ ಕಾರಣಕ್ಕೆ ತಡೆ ನೀಡಲಾಗಿದ್ದು, ಸ್ಪಷ್ಟೀಕರಣ ನೀಡುವಂತೆ ಚುನಾವಣಾ ಆಯೋಗ ಕೇಳಿದೆ. ಅಣ್ಣಾಮಲೈ ವಿರುದ್ಧ 10ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಿವೆ ಎಂದು ಸ್ವತಂತ್ರ ಅಭ್ಯರ್ಥಿಗಳು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವುದಾಗಿ ತಿಳಿಸಿ ನಾಮಪತ್ರಕ್ಕೆ ತಡೆ ನೀಡಲಾಗಿದೆ.

ಅಣ್ಣಾಮಲೈ ಮಾರ್ಚ್ 18ರಂದು ಸೈಕಲ್ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು. ನಾನು ಜನಸಾಮಾನ್ಯರ ಪ್ರತಿನಿಧಿ ಎಂದು ಹೇಳಿಕೊಂಡು ಸೈಕಲ್ನಲ್ಲಿ ಬಂದಿದ್ದ ಅಣ್ಣಾಮಲೈಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಮುನಿರತ್ನ ಸೇರಿದಂತೆ ತಮಿಳುನಾಡಿನ ಬಿಜೆಪಿ ನಾಯಕರು, ಕಾರ್ಯಕರ್ತರು ಬೆಂಬಲ ನೀಡಿದ್ದರು. ಈಗ ಅಣ್ಣಾಮಲೈ ಸ್ಪರ್ಧೆಗೆ ಮೊದಲ ತಡೆ.!

error: Content is protected !!