ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನ ಈಡೇರಿಸಿದ್ದೇವೆ: ಮತ್ತೆ ಪ್ರತಿಭಟನೆ ಸರಿಯಲ್ಲ: ಸಾರಿಗೆ ನೌಕರರ ವಿರುದ್ಧ ಬಿಎಸ್‌ವೈ ಕಿಡಿ - BC Suddi
ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನ ಈಡೇರಿಸಿದ್ದೇವೆ: ಮತ್ತೆ ಪ್ರತಿಭಟನೆ ಸರಿಯಲ್ಲ: ಸಾರಿಗೆ ನೌಕರರ ವಿರುದ್ಧ ಬಿಎಸ್‌ವೈ ಕಿಡಿ

ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನ ಈಡೇರಿಸಿದ್ದೇವೆ: ಮತ್ತೆ ಪ್ರತಿಭಟನೆ ಸರಿಯಲ್ಲ: ಸಾರಿಗೆ ನೌಕರರ ವಿರುದ್ಧ ಬಿಎಸ್‌ವೈ ಕಿಡಿ

ಬೆಳಗಾವಿ: ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನ ಈಡೇರಿಸಿದ್ದೇವೆ. ಇಷ್ಟಾದರೂ ಸಹ ಹಠ ಮಾಡಿ ಬಸ್​ಗಳನ್ನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ಹೊರ ಹಾಕಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ಪ್ರತಿಭಟನೆ ಕೈಬಿಡುವಂತೆ ಈಗಲೂ ವಿನಂತಿ ಮಾಡುತ್ತೇನೆ. ಮಾತುಕತೆ ಮೂಲಕ ಬಗೆಹರಿಸೋಣ. ಶೇ.8ರಷ್ಟು ಹೆಚ್ಚು ಸಂಬಳ ಕೊಡುತ್ತೇವೆ ಅಂತ ಹೇಳಿದ್ದೇವೆ. ಈ ಸಂಬಂಧ ಕೇಂದ್ರಕ್ಕೂ ಪತ್ರ ಬರೆದಿದ್ದೇವೆ. ಅನುಮತಿ ಸಿಕ್ಕ ತಕ್ಷಣ, ಹಾಗೂ ಚುನಾವಣಾ ಆಯೋಗದ ಸಮಸ್ಯೆ ಮುಗಿದ ತಕ್ಷಣ ಹಣವನ್ನು ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಉತ್ತರಾಖಂಡದ ಅರಣ್ಯದ ಹಲವು ಭಾಗಗಳಲ್ಲಿ ಕಾಡ್ಗಿಚ್ಚು: ಅರಣ್ಯ ಸಚಿವರೇ ‘ಕಾಡ್ಗಿಚ್ಚು ನಂದಿಸುವ’ ಪ್ರಯತ್ನ

error: Content is protected !!