ಆಂಬುಲೆನ್ಸ್‌ ಸುಲಿಗೆಕೋರರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು : 108 ಆಂಬುಲೆನ್ಸ್‌ಗೆ ಆದ್ಯತೆ ನೀಡಬೇಕು:ಸಚಿವ ಸುಧಾಕರ್ - BC Suddi
ಆಂಬುಲೆನ್ಸ್‌ ಸುಲಿಗೆಕೋರರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು : 108 ಆಂಬುಲೆನ್ಸ್‌ಗೆ ಆದ್ಯತೆ ನೀಡಬೇಕು:ಸಚಿವ ಸುಧಾಕರ್

ಆಂಬುಲೆನ್ಸ್‌ ಸುಲಿಗೆಕೋರರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು : 108 ಆಂಬುಲೆನ್ಸ್‌ಗೆ ಆದ್ಯತೆ ನೀಡಬೇಕು:ಸಚಿವ ಸುಧಾಕರ್

ಬೆಂಗಳೂರು: “ಕೊರೊನಾ ಸೋಂಕಿತರು ಹಾಗೂ ಶವ ಸಾಗಾಟ ಮಾಡುವ ಆಂಬುಲೆನ್ಸ್‌‌ಗಳ ವಸೂಲಿಗೆ ಶೀಘ್ರವೇ ಸರ್ಕಾರದಿಂದ ದರ ನಿಗದಿಯಾಗಲಿದೆ” ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌‌ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆಂಬುಲೆನ್ಸ್‌ ಸುಲಿಗೆಕೋರರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು. 108 ಆಂಬುಲೆನ್ಸ್‌ಗೆ ಆದ್ಯತೆ ನೀಡಬೇಕು. ಖಾಸಗಿ ಆಂಬುಲೆನ್ಸ್‌ಗಳಿಗೂ ಶೀಘ್ರದಲ್ಲೇ ದರ ನಿಗದಿ ಮಾಡಲಾಗುವುದು” ಎಂದು ಹೇಳಿದ್ದಾರೆ.

“ನಿಮ್ಮ ಆರೋಗ್ಯ, ನಿಮ್ಮೊಂದಿಗೆ ನಾವಿದ್ದೇವೆ. ಜನರು ಆತ್ಮವಿಶ್ವಾಸದಿಂದ ಇರಬೇಕು. ಸಿಎಂ ಹಾಗೂ ಅಧಿಕಾರಿಗಳು ನಿಮ್ಮೊಂದಿಗೆ ಇರುತ್ತಾರೆ. ರೋಗದ ಲಕ್ಷಣ ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿ ವೈದ್ಯರ ಸಲಹೆ ಪಡೆದುಕೊಳ್ಳಿ. ಕೊರೊನಾ ಪಾಸಿಟಿವ್‌ ಬಂದರೆ ಆತಂಕಕ್ಕೊಳಗಾಗಬೇಡಿ. ಧೈರ್ಯದಿಂದ ಇರಿ” ಎಂದಿದ್ದಾರೆ.

“ಆಕ್ಸಿಜನ್‌‌ ಹಾಗೂ ರೆಮ್ಡಿಸಿವರ್‌‌ಗಾಗಿ ಸಹಾಯವಾಣಿ ತೆರೆಯಲಾಗಿದೆ. ಕೊರೊನಾ ಸೋಂಕಿನ ಹೋರಾಟ ಮಧ್ಯೆ ಇದ್ದೇವೆ. ನಾವೆಲ್ಲರೂ ಒಂದುಗೂಡಿ ಹೋರಾಟ ನಡೆಸಬೇಕಿದೆ. ರಾಜ್ಯದಲ್ಲಿ 48 ಗಂಟೆಯಲ್ಲಿ ಎಲ್ಲಿಯೂ ಆಕ್ಸಿಜನ್ ಕೊರತೆಯಾಗಿಲ್ಲ” ಎಂದು ತಿಳಿಸಿದ್ದಾರೆ.

“ಮಾಜಿ ಸಚಿವ ಎಂ.ಬಿ.ಪಾಟೀಲ್‌ ಅವರ ಆಸ್ಪತ್ರೆಯಲ್ಲಿ ಉತ್ತಮ ಕಾರ್ಯ ನಡೆಯುತ್ತಿದೆ. ಸರ್ಕಾರಕ್ಕೆ ಹಾಗೂ ಜನರಿಗೆ ಸ್ಪಂದಿಸಿ ಉತ್ತಮ ಕಾರ್ಯ ಮಾಡಲು ಮುಂದಾಗಿದ್ದಾರೆ” ಎಂದಿದ್ದಾರೆ.

 

ನೈರುತ್ಯ ಪಾಕಿಸ್ತಾನದಲ್ಲಿ ಚೀನಾದ ರಾಯಬಾರಿಗೆ ಆತಿಥ್ಯ ವಹಿಸಿದ್ದ ಹೊಟೇಲ್‌‌‌ನಲ್ಲಿ ಬಾಂಬ್‌ ಸ್ಪೋಟ: 10ಕ್ಕೂ ಅಧಿಕ ಮಂದಿ ಗಾಯ: ನಾಲ್ವರು ಮೃತ್ಯು