ಮಂಗಳೂರು: ಮೀನಿನ ಮೈಮೇಲೆ 'ಅಲ್ಲಾಹ್' ಎಂಬ ಪದವು ಗೋಚರ - BC Suddi
ಮಂಗಳೂರು: ಮೀನಿನ ಮೈಮೇಲೆ ‘ಅಲ್ಲಾಹ್’ ಎಂಬ ಪದವು ಗೋಚರ

ಮಂಗಳೂರು: ಮೀನಿನ ಮೈಮೇಲೆ ‘ಅಲ್ಲಾಹ್’ ಎಂಬ ಪದವು ಗೋಚರ

ಮಂಗಳೂರು: ಈ ಮನೆಯವರು ‘ಆಸ್ಕರ್’ ಅಲಂಕಾರಿಕ ಮೀನು ತಂದು ಅಕ್ವೇರಿಯಂನಲ್ಲಿ ಸಾಕುವುದಕ್ಕೆ ಆರಂಭವಾಗಿ ಎರಡು ವರ್ಷವಾಯಿತು. ಎಲ್ಲ ಮೀನುಗಳೊಂದಿಗೆ ಈ ಮೀನೂ ಇತ್ತು. ಯಾರೂ ಅಷ್ಟೇನೂ ಗಮನ ಹರಿಸುತ್ತಲೂ ಇರಲಿಲ್ಲ. ಆದರೆ, ಏಕಾಏಕಿ‌ ಐದಾರು ದಿನಗಳಲ್ಲಿ ಈ ಮೀನು ಎಲ್ಲರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಅಷ್ಟಕ್ಕೂ ಈ ಮೀನು ಯಾಕಿಷ್ಟು ಪ್ರಸಿದ್ಧಿಯಾಗಿದೆ ಎಂಬುದಕ್ಕೆ ಈ ಸುದ್ದಿ ನೋಡಿ.

‘ಅಲ್ಲಾಹ್’ ಎಂಬ ಪರಮ ಪವಿತ್ರ ನಾಮವೇ ಮುಸ್ಲಿಂ ಧರ್ಮೀಯರಿಗೆ ಸ್ವರ್ಗಸದೃಶ. ಇಂತಹ ‘ಅಲ್ಲಾಹ್’ ಎಂಬ ಅರೇಬಿಕ್ ಭಾಷೆಯಲ್ಲಿನ ನಾಮವು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಮೊಹಮ್ಮದ್ ಮಸೂದ್ ಅವರ ಮನೆಯಿರುವ ಅಕ್ವೇರಿಯಂನ ಆಸ್ಕರ್ ಎಂಬ ಅಲಂಕಾರಿಕ ಮೀನಿನ ಮೈಮೇಲೆ ಮೂಡಿದೆ.!

ಎರಡು ವರ್ಷಗಳಿಂದ ಈ ಮೀನು ಅವರ ಮನೆಯ ಮುಖ್ಯದ್ವಾರದ ಬಳಿಯಿರುವ ಅಕ್ವೇರಿಯಂನಲ್ಲಿದ್ದರೂ, ಈ ಬಗ್ಗೆ ಮಸೂದ್ ಅವರಾಗಲಿ, ಅವರ ಮನೆಯವರಾಗಲೀ ಗಮನಿಸಿರಲಿಲ್ಲ.

ಆದರೆ, ನಾಲ್ಕೈದು ದಿನಗಳ ಹಿಂದೆ ಪ್ಲಂಬಿಂಗ್ ಕೆಲಸಕ್ಕೆಂದು ಮನೆಗೆ ಬಂದ ಕ್ರಿಶ್ಚಿಯನ್ ಧರ್ಮೀಯರೊಬ್ಬರು ಮೀನಿನ ಮೈಮೇಲೆ ಮೂಡಿರುವ ‘ಅಲ್ಲಾಹ್’ ನಾಮವನ್ನು ನೋಡಿದ್ದಾರೆ. ಈ ಬಗ್ಗೆ ಮಸೂದ್ ಅವರ ಗಮನವನ್ನೂ ಸೆಳೆದಿದ್ದಾರೆ. ಕುತೂಹಲಗೊಂಡ ಮಸೂದ್ ಅವರು ಮೀನನ್ನು ಪರಿಶೀಲನೆ ಮಾಡಿದಾಗ ಅವರಿಗೂ ಮೀನಿನ ಎರಡೂ ಬದಿಗಳಲ್ಲಿಯೂ ಅಲ್ಲಾಹ್ ಪದ ಮೂಡಿರೋದು ಕಂಡಿದೆ. ಈ ಬಗ್ಗೆ ಅವರು ಕುದ್ರೋಳಿ ಜಾಮಿಯಾ ಮಸೀದಿಯ ಪ್ರಧಾನ ಧರ್ಮಗುರು ಸಹಿತ ನಾಲ್ವರನ್ನು ಕರೆಸಿ ಖಚಿತಪಡಿಸಿದ್ದು, ಅವರೂ ಕೂಡ ‘ಅಲ್ಲಾಹ್’ ಪದ ಮೂಡಿರುವುದನ್ನು ಖಚಿತಪಡಿಸಿದ್ದಾರೆ‌.

ಮೀನಿನ ಮೈಮೇಲೆ ‘ಅಲ್ಲಾಹ್’ ಎಂಬ ಪದವು ಗೋಚರವಾಗಿರೋದನ್ನು ಮೊದಲು ಕಂಡಿರುವ ಪ್ಲಂಬರ್, ಕ್ರಿಶ್ಚಿಯನ್ ಆಗಿದ್ದರೂ, ಹಿಂದೆ ಅರಬ್ ರಾಷ್ಟ್ರದಲ್ಲಿ ನೌಕರಿ ಮಾಡುತ್ತಿದ್ದವರು. ಆದ್ದರಿಂದ ಅವರಿಗೆ ಅರೇಬಿಕ್ ಭಾಷೆಯ ಪರಿಚಯವಿತ್ತು. ಇದರಿಂದ ಯಾರ ಗೋಚರಕ್ಕೂ ನಿಲುಕದ ಸೃಷ್ಟಿಯ ವೈಚಿತ್ರ್ಯವೊಂದು ಅವರ ದೃಷ್ಟಿಗೆ ಬಿದ್ದು, ಕುತೂಹಲಕ್ಕೆ ನಾಂದಿಯಾಗಿದೆ.

ವಿನಯ್ ಕುಲಕರ್ಣಿ ಜಾಮೀನು ಅರ್ಜಿಯನ್ನು ಬೆಂಗಳೂರಿನ ಹೈಕೋರ್ಟ್ ಮತ್ತೆ ಮುಂದೂಡಿಕೆ