ಅಮೆರಿಕದ: ಏರ್ ಶೋ ತಾಲೀಮಿನ ವೇಳೆ ಸಮುದ್ರ ಸ್ಪರ್ಶಿಸಿದ ವಿಮಾನ - BC Suddi
ಅಮೆರಿಕದ: ಏರ್ ಶೋ ತಾಲೀಮಿನ ವೇಳೆ ಸಮುದ್ರ ಸ್ಪರ್ಶಿಸಿದ ವಿಮಾನ

ಅಮೆರಿಕದ: ಏರ್ ಶೋ ತಾಲೀಮಿನ ವೇಳೆ ಸಮುದ್ರ ಸ್ಪರ್ಶಿಸಿದ ವಿಮಾನ

ಅಮೆರಿಕದ ಫ್ಲೋರಿಡಾದ ಸಾಗರದಲ್ಲಿ ಎಂಜಿನ್ ವೈಫಲ್ಯ ಕಾರಣ ವಿಮಾನವೊಂದು ತುರ್ತು ಲ್ಯಾಂಡ್ ಆಗುವ ಮೂಲಕ ಜನರಿಗೆ ಶಾಕ್ ಕೊಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನವು ಕೋಕೋ ಏರ್ ಶೋದಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಕೋಕೋ ಸಮುದ್ರದಲ್ಲಿ ತಾಲೀಮು ನಡೆಸುವ ವೇಳೆ ಈ ಘಟನೆ ಸಂಭವಿಸಿದೆ.

ತಾಂತ್ರಿಕ ದೋಷದಿಂದಾಗಿ ವಿಮಾನ ಬೀಚ್ ಗೆ ಇಳಿದ ದೃಶ್ಯ ಕಂಡ ಕಡಲ ತೀರದ ಜನರು ಭಯಗೊಂಡಿದ್ದಾರೆ. ಘಟನೆಯಲ್ಲಿ ಪೈಲೆಟ್ ಅಥವಾ ಸುತ್ತಲಿದ್ದ ಸಿಬ್ಬಂದಿಗೆ ಯಾವುದೇ ಗಾಯವಾಗಿಲ್ಲ ಎಂದು ಏರ್ ಶೋ ಮೂಲ ಮಾಹಿತಿ ಹಂಚಿಕೊಂಡಿದೆ. ವಿಡಿಯೋವನ್ನು ನೋಡಿದ ನೆಟ್ಟಿಗರು ಪೈಲ್ ಟ್ ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾರತದ ಬಗ್ಗೆ ಅಮೆರಿಕದಲ್ಲಿ ಅಲರ್ಟ್, ಕೆಂಪು ಪಟ್ಟಿಗೆ ಸೇರಿಸಿದ ಬ್ರಿಟನ್