'ಏರ್ ಇಂಡಿಯಾದಲ್ಲಿ ಶೇ. 100 ಹೂಡಿಕೆ ಮಾಡಲು ನಿರ್ಧಾರ' : ಸಚಿವ ಹರ್ದೀಪ್ ಸಿಂಗ್ ಪುರಿ - BC Suddi
‘ಏರ್ ಇಂಡಿಯಾದಲ್ಲಿ ಶೇ. 100 ಹೂಡಿಕೆ ಮಾಡಲು ನಿರ್ಧಾರ’ : ಸಚಿವ ಹರ್ದೀಪ್ ಸಿಂಗ್ ಪುರಿ

‘ಏರ್ ಇಂಡಿಯಾದಲ್ಲಿ ಶೇ. 100 ಹೂಡಿಕೆ ಮಾಡಲು ನಿರ್ಧಾರ’ : ಸಚಿವ ಹರ್ದೀಪ್ ಸಿಂಗ್ ಪುರಿ

ನವದೆಹಲಿ : ಏರ್ ಇಂಡಿಯಾದಲ್ಲಿ ಸಂಪೂರ್ಣವಾಗಿ ಹೂಡಿಕೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, “ಏರ್ ಇಂಡಿಯಾದಲ್ಲಿ ಶೇ. 100 ಹೂಡಿಕೆ ಮಾಡಲು ಎಂದು ನಿರ್ಧರಿಸಿದ್ದು, ಏರ್​ ಇಂಡಿಯಾ ವಿಮಾನಯಾನ ಸಂಸ್ಥೆಗೆ ಹೂಡಿಕೆ ಮಾಡುವುದು ಮತ್ತು ಮಾಡದಿರುವುದು ಈ ಎರಡೇ ಆಯ್ಕೆಗಳಿರುವುದರಿಂದ ಇದು ಹೂಡಿಕೆ ಮತ್ತು ಮುಚ್ಚುವಿಕೆಯ ನಡುವೆ ಇದೆ” ಎಂದರು.

“ಕೇಂದ್ರ ಸರ್ಕಾರವು ಏರ್ ಇಂಡಿಯಾ ಹೂಡಿಕೆಗಾಗಿ ಹೊಸ ಸಮಯವನ್ನು ನೋಡುತ್ತಿದ್ದು, ಮುಂದಿನ ದಿನಗಳಲ್ಲಿ ಹಣಕಾಸಿನ ಹರಾಜು ಪ್ರಕ್ರಿಯೆಗೆ ಖಾಸಗಿ ಕಂಪನಿಗಳನ್ನು ಆಹ್ವಾನಿಸಲಾಗುವುದು” ಎಂದಿದ್ದಾರೆ.

ಇನ್ನು 2007 ರಲ್ಲಿ ಇಂಡಿಯನ್ ಏರ್‌ಲೈನ್ಸ್‌ನೊಂದಿಗೆ ವಿಲೀನಗೊಂಡಾಗಿನಿಂದ ನಷ್ಟದಲ್ಲಿದ್ದ ಏರ್ ಇಂಡಿಯಾದಲ್ಲಿ ತನ್ನ ಶೇ. 100 ರಷ್ಟು ಪಾಲನ್ನು ಮಾರಾಟ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದ್ದು, ಇಲ್ಲಿ ಯಾವುದೇ ಆಯ್ಕೆ ಇಲ್ಲ, ನಾವು ಏರ್​ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಖಾಸಗೀಕರಣಗೊಳಿಸುತ್ತೇವೆ. ಇಲ್ಲವೇ ನಾವು ವಿಮಾನಯಾನ ಸಂಸ್ಥೆಯನ್ನು ಮುಚ್ಚುತ್ತೇವೆ” ಎಂದು ಹೇಳಿದ್ದಾರೆ.

 

error: Content is protected !!