ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್ ತಂಡ - BC Suddi
ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್ ತಂಡ

ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್ ತಂಡ

ಚೆನ್ನೈ: ನಾಯಕ ಕೆ.ಎಲ್.ರಾಹುಲ್ ತಾಳ್ಮೆಯ ಅರ್ಧಶತಕ, ಕ್ರಿಸ್ ಗೇಲ್ ಅಬ್ಬರಿಂದ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಚೆನ್ನೈನಲ್ಲಿ ನಡೆದ ಐಪಿಎಲ್ ಟೂರ್ನಿಯ 17ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ 132 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು.

ಈ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ 14 ಎಸೆತಗಳು ಬಾಕಿ ಇರುವಂತೆ 1 ವಿಕೆಟ್ ನಷ್ಟಕ್ಕೆ 132 ಚಚ್ಚಿ ಗೆದ್ದು ಬೀಗಿದೆ. ಪಂಜಾಬ್ ಪರ ನಾಯಕ ಕೆ.ಎಲ್.ರಾಹುಲ್ ಅಜೇಯ 60 ರನ್, ಕ್ರಿಸ್ ಗೇಲ್ ಅಜೇಯ 43 ರನ್ ಹಾಗೂ ಮಯಾಂಕ್ ಅಗರ್ವಾಲ್ 25 ರನ್ ಗಳಿಸಿದರು.
ಇದಕ್ಕೂ ಮುನ್ನ ಮುಂಬೈ 6 ವಿಕೆಟ್ 131 ರನ್ ಗಳಿಸಿತ್ತು. ತಂಡದ ಪರ ರೋಹಿತ್ ಶರ್ಮಾ 63 ರನ್, ಸೂರ್ಯಕುಮಾರ್ ಯಾದವ್ 33 ರನ್ ಗಳಿಸಿದ್ದರು.

ಉಳಿದಂತೆ ಕ್ವಿಂಟನ್ ಡಿ ಕಾಕ್ (3 ರನ್), ಕಿಶಾನ್ ಕಿಶನ್ (6 ರನ್), ಹಾರ್ದಿಕ್ ಪಾಂಡ್ಯ (1 ರನ್), ಕೃಣಾಲ್ ಪಾಂಡ್ಯ (3 ರನ್) ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಕೊನೆಯಲ್ಲಿ ಕೀರನ್ ಪೋಲಾರ್ಡ್ ಅಜೇಯ 16 ರನ್ ಚಚ್ಚಿದ್ದರು. ಪಂಜಾಬ್ ಪರ ಮೊಹಮ್ಮದ್ ಶಮಿ, ರವಿ ಬಿಷ್ಣೋಯ್ ತಲಾ 2 ವಿಕೆಟ್ ಕಿತ್ತರೆ, ಅರ್ಷದೀಪ್‌ ಸಿಂಗ್‌ ಹಾಗೂ ಮೊಯಿಸಸ್ ಹೆನ್ರಿಕ್ಸ್ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾಗಿದ್ದರು.

ದೇಶದ 48ನೇ ಸಿಜಿಐ ಆಗಿ ನ್ಯಾ. ಎನ್‌.ವಿ. ರಮಣ ಇಂದು ಅಧಿಕಾರ ಸ್ವೀಕಾರ