ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್..! - BC Suddi
ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್..!

ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್..!

ನವದೆಹಲಿ: ಫಾಫ್ ಡು ಪ್ಲೆಸಿಸ್ ಹಾಗೂ ಋತುರಾಜ್ ಗಾಯಕ್ವಾಡ್ ಅದ್ಭುತ ಜೊತೆಯಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ ಟೂರ್ನಿಯ 23ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್, ವಾರ್ನರ್ 57 ರನ್ (55 ಎಸೆತ), ಜಾನಿ ಬೇರ್ಸ್ಟೋವ್ 7 ರನ್, ಮನೀಶ್ ಪಾಂಡೆ 61 ರನ್ (46 ಎಸೆತ), ಕೇನ್ ವಿಲಿಯಮ್ಸನ್ 26 ರನ್, ಕೇದಾರ್ ಜಾಧವ್ 12 ರನ್‌ನೊಂದಿಗೆ 20 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿತ್ತು.

ಈ ಗುರಿ ಬೆನ್ನಟ್ಟಿದ ಚೆನ್ನೈ ತಂಡವು ಋತುರಾಜ್ ಗಾಯಕ್ವಾಡ್ 75 ರನ್ (44 ಎಸೆತ), ಫಾಫ್ ಡು ಪ್ಲೆಸಿಸ್ 56 ರನ್ (38 ಎಸೆತ), ಮೊಯೀನ್ ಅಲಿ 15 ರನ್, ರವೀಂದ್ರ ಜಡೇಜಾ 7 ರನ್ ಹಾಗೂ ಸುರೇಶ್ ರೈನಾ 17 ರನ್‌ ಸಹಾಯದಿಂದ 18.3 ಓವರ್‌ಗೆ 3 ವಿಕೆಟ್ ಕಳೆದು 173 ರನ್ ಚಚ್ಚಿ ಗೆದ್ದು ಬೀಗಿದೆ.

ಕೊರೊನಾ ವಿರುದ್ದ ಹೋರಾಡುತ್ತಿರುವ ಭಾರತಕ್ಕೆ ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ದ : ವಿಶ್ವಸಂಸ್ಥೆ