ಆರೋಪಿಯನ್ನ ಬಿಟ್ಟು ಸಂತ್ರಸ್ತೆ ಪೋಷಕರ ವಿಚಾರಣೆ ಯಾವ ನ್ಯಾಯ?- ಎಸ್‌ಐಟಿ ವಿರುದ್ಧ ಯುವತಿ ಪರ ವಕೀಲ ಕಿಡಿ - BC Suddi
ಆರೋಪಿಯನ್ನ ಬಿಟ್ಟು ಸಂತ್ರಸ್ತೆ ಪೋಷಕರ ವಿಚಾರಣೆ ಯಾವ ನ್ಯಾಯ?- ಎಸ್‌ಐಟಿ ವಿರುದ್ಧ ಯುವತಿ ಪರ ವಕೀಲ ಕಿಡಿ

ಆರೋಪಿಯನ್ನ ಬಿಟ್ಟು ಸಂತ್ರಸ್ತೆ ಪೋಷಕರ ವಿಚಾರಣೆ ಯಾವ ನ್ಯಾಯ?- ಎಸ್‌ಐಟಿ ವಿರುದ್ಧ ಯುವತಿ ಪರ ವಕೀಲ ಕಿಡಿ

ಬೆಂಗಳೂರು: ಸೆಕ್ಸ್‌ ಡಿಸಿ ಕೇಸ್‌ನಲ್ಲಿ ಆರೋಪಿಯನ್ನು ಈವರೆಗೂ ವಿಚಾರಣೆಗೆ ಒಳಪಡಿಸಿಲ್ಲ. ಆದರೆ ಸಂತ್ರಸ್ತೆಯ ಪೋಷಕರನ್ನು ವಿಚಾರಣೆ ನಡೆಸುತ್ತಿರುವುದು ಯಾವ ನ್ಯಾಯ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರ ರಾಸಲೀಲೆ ಸಿಡಿ ಪ್ರಕರಣದ ಸಂಬಂಧ ಸಂತ್ರಸ್ತೆಯ ಪೋಷಕರು ಇಂದು ವಿಶೇಷ ತನಿಖಾ ತಂಡದ (ಎಸ್ಐಟಿ) ವಿಚಾರಣೆಗೆ ಹಾಜರಾಗಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಲು ನಮಗೆ ಅವಕಾಶ ಸಿಕ್ಕಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ ನಿನ್ನೆಯೇ ಎಫ್‌ಐಆರ್ ದಾಖಲಾಗಿದ್ದರೂ ಎಸ್‌ಐಟಿ ಅಧಿಕಾರಿಗಳು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿಲ್ಲ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಸರ್ಕಾರದ ಪರ ಕೆಲಸ ಮಾಡುತ್ತಿದ್ದಾರಾ ಅಥವಾ ನ್ಯಾಯದ ಪರ ಕೆಲಸ ಮಾಡುತ್ತಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ ಎಂದು ದೂರಿದ್ದಾರೆ.

ಸುಮ್ನಿದ್ರೆ ಸರಿ, ಇಲ್ಲದಿದ್ರೆ ಮುಖವಾಡ ಬಯಲು ಮಾಡ್ತೀನಿ: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

error: Content is protected !!