ಬಾಲಿವುಡ್ ನಟ ಅಜಾಜ್ ಖಾನ್ ಬಂಧಿಸಿದ ಮಾದಕ ವಸ್ತು ನಿಯಂತ್ರಣ ದಳ - BC Suddi
ಬಾಲಿವುಡ್ ನಟ ಅಜಾಜ್ ಖಾನ್ ಬಂಧಿಸಿದ ಮಾದಕ ವಸ್ತು ನಿಯಂತ್ರಣ ದಳ

ಬಾಲಿವುಡ್ ನಟ ಅಜಾಜ್ ಖಾನ್ ಬಂಧಿಸಿದ ಮಾದಕ ವಸ್ತು ನಿಯಂತ್ರಣ ದಳ

ಮುಂಬೈ: ಬಾಲಿವುಡ್ ನಟ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಅಜಾಜ್ ಖಾನ್ ಅವರನ್ನು, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಶಕ್ಕೆ ಪಡೆದಿದೆ. ಅದಕ್ಕೂ ಮೊದಲು ಮಾ. 30ರ ಮಂಗಳವಾರ ಸಂಜೆ ಮುಂಬೈನ ವಿಮಾನ ನಿಲ್ದಾಣದಲ್ಲಿ ಖಾನ್ ಅವರನ್ನು ವಶಕ್ಕೆ ಪಡೆದ ಮಾದಕ ವಸ್ತು ನಿಯಂತ್ರಣ ದಳ ಸತತ ಎಂಟು ಗಂಟೆಗಳ ಕಾಲ ಅವರನ್ನು ವಿಚಾರಣೆಗೊಳಪಡಿಸಿತ್ತು.

ಡ್ರಗ್ ಪೆಡ್ಲರ್ ಶದಾಬದ ಬತಾತಾ ಬಂಧನದ ನಂತರದಲ್ಲಿ ಅಜಾಜ್ ಅವರ ಹೆಸರು ಡ್ರಗ್ ಕೇಸ್‌ನಲ್ಲಿ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಅಜಾಜ್ ಖಾನ್ ಜೊತೆಗೆ ಅಂಧೇರಿ ಮತ್ತು ಲೋಖಾಂಡವಾಲಾ ಪ್ರದೇಶಗಳಲ್ಲಿ ಶೋಧಕಾರ್ಯ ನಡೆಸಿದೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಅಜಾಜ್ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 7 ನಲ್ಲಿ ಭಾಗವಹಿಸಿದ್ದರು.

ಅಷ್ಟೇ ಅಲ್ಲದೆ 8ನೇ ಸೀಸನ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಅವರು ಬಿಗ್ ಬಾಸ್ ಮನೆಯೊಳಗೆ ಹೆಚ್ಚು ಮಾತನಾಡುವ ಮತ್ತು ಕಾಂಟ್ರವರ್ಸಿ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿದ್ದರು. ಅಜಾಜ್ ಖಾನ್ ಹಲವಾರು ಹಿಂದಿ ಮತ್ತು ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಕೂಡ, ದುರುದ್ದೇಶಪೂರಿತ ಭಾಷಣ, ನಿಷೇಧಿತ ಆದೇಶಗಳ ಉಲ್ಲಂಘನೆ, ಮಾನನಷ್ಟ ಮೊಕದ್ದಮೆಯಡಿಯಲ್ಲಿ ಅಜಾಜ್ ಖಾನ್ ಅವರನ್ನು ಬಂಧಿಸಲಾಗಿತ್ತು.

ಬಿಜೆಪಿ ವಿರುದ್ಧವೆ ಬಂಡಾಯದ ಸಮರ‌ ಸಾರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಚುನಾವಣೆ ಅಖಾಡಕ್ಕೆ ಇಳಿದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ

error: Content is protected !!