ಚಿಕಿತ್ಸೆ ಫಲಿಸದೇ ತಮಿಳು ನಟ ವಿವೇಕ್‌ ನಿಧನ - BC Suddi
ಚಿಕಿತ್ಸೆ ಫಲಿಸದೇ ತಮಿಳು ನಟ ವಿವೇಕ್‌ ನಿಧನ

ಚಿಕಿತ್ಸೆ ಫಲಿಸದೇ ತಮಿಳು ನಟ ವಿವೇಕ್‌ ನಿಧನ

ಚೆನ್ನೈ: ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಹಾಸ್ಯ ನಟ ವಿವೇಕ್‌ (59) ಚಿಕಿತ್ಸೆ ಫಲಿಸದೇ ಶನಿವಾರ ನಿಧನರಾದರು.

ಹೃದಯಾಘಾತದಿಂದ ನಟ ವಿವೇಕ್‌ ಎಸ್‌ಐಎಂಎಸ್‌ ಆಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದರು. ಹೃದಯ ನಾಳದಲ್ಲಿ ರಕ್ತ ಸಂಚಾರದಲ್ಲಿ ತೊಂದರೆಯಾಗಿದ್ದರಿಂದ ಅವರ ಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

ವಿವೇಕ್‌ ತಮಿಳು ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತಿಸಿಕೊಂಡಿದ್ದರು. ರನ್‌, ಸಾಮಿ, ಪೆರಾಜಗನ್‌, ಶಿವಾಜಿ, ಅನ್ನಿಯಾನ್‌ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.