ಸಿಡಿ ಪ್ರಕರಣ : 'ಮಹಾನಾಯಕ' ಪದ ಬಳಕೆಗೆ ನಟ ಪ್ರಥಮ್ ಆಕ್ರೋಶ - BC Suddi
ಸಿಡಿ ಪ್ರಕರಣ : ‘ಮಹಾನಾಯಕ’ ಪದ ಬಳಕೆಗೆ ನಟ ಪ್ರಥಮ್ ಆಕ್ರೋಶ

ಸಿಡಿ ಪ್ರಕರಣ : ‘ಮಹಾನಾಯಕ’ ಪದ ಬಳಕೆಗೆ ನಟ ಪ್ರಥಮ್ ಆಕ್ರೋಶ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದು ಎನ್ನಲಾಗುತ್ತಿರುವ ಸಿಡಿ ಪ್ರಕರಣದ ಸುತ್ತ ಗಿರಕಿ ಹೊಡೆಯುತ್ತಿರುವ ‘ಮಹಾನಾಯಕ’ ಪದ ಬಳಕೆಗೆ ಸಿನಿಮಾ ನಟ,ನಿರ್ದೇಶಕ ಹಾಗೂ ಬಿಗ್ ಬಾಸ್ ವಿಜೇತ ಪ್ರಥಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾನುವಾರ ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಥಮ್, ‘ದೇಶಕ್ಕೆ ಸಂವಿಧಾನ ಕೊಡುಗೆ ನೀಡಿದ ಅಂಬೇಡ್ಕರ್ ಅವರಿಗೆ ಗೌರವದಿಂದ ಮಹಾನಾಯಕ ಎಂದು ಕರೆಯುತ್ತಿದ್ದರು. ಈಗ CD ಮಾಡೋರನ್ನ ಮಹಾನಾಯಕ ಅಂತಿದ್ದಾರೆ. ಯಾವ ಪದ ಯಾರಿಗೆ ಬಳಸಬೇಕು ಅನ್ನೋ ಕನಿಷ್ಟ ಜ್ಞಾನ ಬೇಡ್ವಾ ನಿಮ್ಗೆ? ಎಂದು ಪ್ರಶ್ನಿಸಿದ್ದಾರೆ.

ಅಂಬೇಡ್ಕರ್ ಫೋಟೋ ವಿರೂಪವಾದಾಗ ಅಗೌರವ ಆಗಲ್ಲ, ಇಂತ ಪದಗಳನ್ನ ಅಶ್ಲೀಲ CD ಕೇಸ್ ನವರಿಗೆ ಬಳಸಿದ್ರೆ ನಿಜವಾದ ಅವಮಾನ ಮಾಡಿದಂತೆ. ಇನ್ನೊಮ್ಮೆ ಮಹಾನಾಯಕ ಅಂದ್ರೆ ಮುಖಕ್ಕೆ ಉಗೀರಿ ಎಂದು ಕಿಡಿ ಕಾರಿದ್ದಾರೆ.

ಕಳೆದ 26 ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಅಶ್ಲೀಲ ಸಿಡಿ ಪ್ರಕರಣ ಸಂಚಲನ ಮೂಡಿಸುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ಸಂಘರ್ಷಕ್ಕೆ ಈ ಪ್ರಕರಣ ಎಡೆ ಮಾಡಿಕೊಟ್ಟಿದೆ. ಆರಂಭದಲ್ಲೇ ಸಿಡಿ ಬಹಿರಂಗದ ಹಿಂದೆ ‘ಮಹಾನಾಯಕ’ನ ಕೈವಾಡ ಇದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು. ನಂತರ ದಿನಗಳಲ್ಲಿ ಉಭಯ ಪಕ್ಷಗಳ ಪ್ರಮುಖ ನಾಯಕರು ಸಹ ‘ಮಹಾನಾಯಕ’ ಪದ ಸಾಕಷ್ಟು ಬಾರಿ ಪ್ರಕರಣದಡಿ ಎಳೆದು ತಂದಿದ್ದರು.

error: Content is protected !!