ಕಿರುತೆರೆ, ಬೆಳ್ಳಿ ತೆರೆಯ ಹಿರಿಯ ನಟ ಸತೀಶ್ ಕೌಲ್ ಕೊರೊನಾಗೆ ಬಲಿ - BC Suddi
ಕಿರುತೆರೆ, ಬೆಳ್ಳಿ ತೆರೆಯ ಹಿರಿಯ ನಟ ಸತೀಶ್ ಕೌಲ್ ಕೊರೊನಾಗೆ ಬಲಿ

ಕಿರುತೆರೆ, ಬೆಳ್ಳಿ ತೆರೆಯ ಹಿರಿಯ ನಟ ಸತೀಶ್ ಕೌಲ್ ಕೊರೊನಾಗೆ ಬಲಿ

ಲುಧಿಯಾನ: ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಅಭಿನಯಿಸುತ್ತಿರುವ ಹಿರಿಯ ನಟ ಸತೀಶ್ ಕೌಲ್(74 ) ಇಂದು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸತೀಶ್ ಅವರಿಗೆ ಕಳೆದ ಆರು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಸತೀಶ್ ಕೌಲ್ ಅವರ ಸಹೋದರಿ ಸತ್ಯದೇವಿ ತಿಳಿಸಿದ್ದಾರೆ.

ಸತೀಶ್ ಅವರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಭಾರತ’ ಧಾರವಾಹಿಯಲ್ಲಿ ಇಂದ್ರನ ಪಾತ್ರಕ್ಕೆ ಜೀವ ತುಂಬಿದ್ದರು.

ಸುಮಾರು 300 ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಸತೀಶ್ ಕೊನೆಯ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುವಂತಾಗಿದ್ದು, ಕಳೆದ ವರ್ಷ ಔಷಧ ಖರಿದೀಸಲೂ ಇವರು ಪರಿತಪಿಸುವಂತಾಯಿತು. ಅಂದು ಇವರು ಚಿತ್ರರಂಗದ ನೆರವು ನಿರೀಕ್ಷಸಿದ್ದರು ಎನ್ನಲಾಗಿದೆ.