ಆರನೇ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಿಸದಿರಲು ವೈಜ್ಞಾನಿಕ ಕಾರಣಗಳೇನು?: ಕೋಡಿಹಳ್ಳಿ ಪ್ರಶ್ನೆ - BC Suddi
ಆರನೇ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಿಸದಿರಲು ವೈಜ್ಞಾನಿಕ ಕಾರಣಗಳೇನು?: ಕೋಡಿಹಳ್ಳಿ ಪ್ರಶ್ನೆ

ಆರನೇ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಿಸದಿರಲು ವೈಜ್ಞಾನಿಕ ಕಾರಣಗಳೇನು?: ಕೋಡಿಹಳ್ಳಿ ಪ್ರಶ್ನೆ

ಬೆಂಗಳೂರು: ರಾಜ್ಯದ ಎಲ್ಲ ಸಾರಿಗೆ ನಿಗಮಗಳ ನೌಕರರಿಗೆ 6ನೇ ವೇತನ ಆಯೋಗದನುಸಾರ ವೇತನ ಜಾರಿ ಮಾಡದಿರಲು ವೈಜ್ಞಾನಿಕ ಕಾರಣವನ್ನು ನೀಡಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ನಾಳೆ ಕೂಡ ಸಾರಿಗೆ ನೌಕರರ ಮುಷ್ಕರ ಮುಂದುವರಿಯಲಿದೆ. ಆರನೇ ವೇತನ ಆಯೋಗದ ಪ್ರಕಾರ ವೇತನ ಹೆಚ್ಚಿಸದಿರಲು ವೈಜ್ಞಾನಿಕ ಕಾರಣಗಳೇನು? ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಮುಷ್ಕರ ನಿರತರಾಗಿರುವ ನೌಕರರಿಗೆ ಸಂಬಳ ಕಟ್, ವಜಾ ಮತ್ತಿತರ ಬೆದರಿಕೆ ಹಾಕಲಾಗುತ್ತಿದೆ. ಸಕಾಲಕ್ಕೆ ಸಂಬಳ ಇಲ್ಲದೇ ಮುಷ್ಕರದಲ್ಲಿರುವ ಸಾರಿಗೆ ನೌಕರರು ಮುಂಬರುವ ಯುಗಾದಿ ಹಬ್ಬ ಆಚರಿಸೋದು ಹೇಗೆ ಎಂದು ಕೋಡಿಹಳ್ಳಿ ಪ್ರಶ್ನಿಸಿದ್ದಾರೆ.

ಡಿಸಿಎಂ ಗೋವಿಂದ ಕಾರಜೋಳಗೆ 2ನೇ ಬಾರಿ ತಗುಲಿದ ಕೊರೊನಾ ಸೋಂಕು