ಭಾರತದ ಬಗ್ಗೆ ಅಮೆರಿಕದಲ್ಲಿ ಅಲರ್ಟ್, ಕೆಂಪು ಪಟ್ಟಿಗೆ ಸೇರಿಸಿದ ಬ್ರಿಟನ್ - BC Suddi
ಭಾರತದ ಬಗ್ಗೆ ಅಮೆರಿಕದಲ್ಲಿ ಅಲರ್ಟ್, ಕೆಂಪು ಪಟ್ಟಿಗೆ ಸೇರಿಸಿದ ಬ್ರಿಟನ್

ಭಾರತದ ಬಗ್ಗೆ ಅಮೆರಿಕದಲ್ಲಿ ಅಲರ್ಟ್, ಕೆಂಪು ಪಟ್ಟಿಗೆ ಸೇರಿಸಿದ ಬ್ರಿಟನ್

ನ್ಯೂಯಾರ್ಕ್/ಲಂಡನ್ : ಭಾರತದಲ್ಲಿ ಕೊರೊನಾ 2ನೇ ಅಲೆಯಿಂದ ಸಂಭವಿಸುತ್ತಿರುವ ಸಾವು ನೋವುಗಳನ್ನು ಕಂಡ ವಿದೇಶಗಳು ಭಾರತ ಡೇಂಜರ್ ಎನ್ನುವ ಹಣೆ ಪಟ್ಟಿ ಕಟ್ಟಿವೆ. ಅಮೆರಿಕ ಹಾಗೂ ಬ್ರಿಟನ್ ಸರ್ಕಾರಗಳು ತಮ್ಮ ಪ್ರಜೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಸಾರಿವೆ.

ಪೂರ್ಣ ಪ್ರಮಾಣದ ಕೊರೊನಾನಾ ಲಸಿಕೆಯನ್ನು ಈಗಾಗಲೇ ಪಡೆದಿದ್ದರೂ ಭಾರತಕ್ಕೆ ಹೋಗಬೇಡಿ. ಒಂದು ವೇಳೆ ಭೇಟಿ ಅನಿವಾರ್ಯವಾದರೆ ಲಸಿಕೆಯ ಎಲ್ಲ ಡೋಸ್ ಪಡೆದುಕೊಂಡೇ ಹೋಗಿ ಎಂದು ಅಮೆರಿಕ ತನ್ನ ಪ್ರಜೆಗಳಿಗೆ ತಾಕೀತು ಮಾಡಿದೆ.
ಅಲ್ಲದೆ ಭಾರತವನ್ನು ‘ಲೆವೆಲ್ 4’ ವಿಭಾಗಕ್ಕೆ ಸೇರಿಸಿದೆ. ತನ್ಮೂಲಕ ಅತಿಹೆಚ್ಚು ಕೊರೊನಾದಿಂದ ಬಾಧಿತವಾಗಿರುವ ದೇಶ ಎಂದು ಪರಿಗಣಿಸಿದೆ.

ಮತ್ತೊಂದೆಡೆ, ಭಾರತವನ್ನು ಬ್ರಿಟನ್ ‘ಕೆಂಪು ಪಟ್ಟಿ’ಗೆ ಸೇರ್ಪಡೆ ಮಾಡಿದೆ. ಇದರಿಂದಾಗಿ ಬ್ರಿಟನ್ ಪ್ರಜೆಗಳನ್ನು ಹೊರತುಪಡಿಸಿ ಬೇರೆಯವರು ಬ್ರಿಟನ್ ಗೆ ಪ್ರಯಾಣ ಬೆಳೆಸುವಂತಿಲ್ಲ. ಬ್ರಿಟನ್ ನಿವಾಸಿಗಳು ಭಾರತದಿಂದ ಹೋದರೆ, 10 ದಿನ ಕಡ್ಡಾಯ ಕ್ವಾರಂಟೈನ್ ಗೆ ಒಳಪಡಬೇಕಾಗುತ್ತದೆ.

ಬ್ರಿಟನ್ ನಲ್ಲಿ ಈಗಾಗಲೇ ಭಾರತ ರೂಪಾಂತರಿ ವೈರಸ್ ನ 103 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇವೆಲ್ಲ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಿಸಿದ್ದಾಗಿವೆ. ಭಾರತ ರೂಪಾಂತರಿ ವೈರಸ್ ಹೆಚ್ಚು ಪ್ರಸರಣ ಅಥವಾ ರೋಗ ನಿರೋಧಕ ಸಾಮರ್ಥ್ಯ ಹೊಂದಿದೆಯೇ ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭಾರತವನ್ನು ಕೆಂಪುಪಟ್ಟಿಗೆ ಸೇರಿಸಲಾಗಿದೆ.

ಕೊರೊನಾ ಎರಡನೇ ಅಲೆ : ಸರಿಯಾದ ಸಮಯಕ್ಕೆ ಬಂದ ಪ್ರಾಣವಾಯು : ಉಳಿದವು 500 ಜೀವ…