ಎಬಿ ಡಿವಿಲಿಯರ್ಸ್ ಆಟಕ್ಕೆ ಮನಸೋತ ವೀರೇಂದ್ರ ಸೆಹ್ವಾಗ್‌ - BC Suddi
ಎಬಿ ಡಿವಿಲಿಯರ್ಸ್ ಆಟಕ್ಕೆ ಮನಸೋತ ವೀರೇಂದ್ರ ಸೆಹ್ವಾಗ್‌

ಎಬಿ ಡಿವಿಲಿಯರ್ಸ್ ಆಟಕ್ಕೆ ಮನಸೋತ ವೀರೇಂದ್ರ ಸೆಹ್ವಾಗ್‌

ಚೆನ್ನೈ : 2021ರ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಮೊದಲ ದಿನದ ಪಂದ್ಯದಲ್ಲಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ. ಎಬಿ ಡಿವಿಲಿಯರ್ಸ್ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಐಪಿಎಲ್ ಲೋಗೊವನ್ನು ಎಬಿಡಿಯ ಶಾಟ್ ಒಂದೇ, ಎಬಿಡಿ ಶಾಟ್‌ ನೋಡಿ ಲೋಗೋವನ್ನು ನಂತರ ರಹಸ್ಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆರ್‌ಸಿಬಿ ಪಾಲಿಗೆ ಎಬಿ ಡಿವಿಲಿಯರ್ಸ್‌ ಮತ್ತೊಮ್ಮೆ ಹೀರೋ ಆಗಿ ಹೊರಹೊಮ್ಮಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ವಿಲ್ ಪವರ್‌ಗೆ ಡಿವಿಲಿಯರ್ಸ್ ಪವರ್ ಸಮ. ಐಪಿಎಲ್ ಲೋಗೊವನ್ನು ಎಬಿಡಿಯ ಶಾಟ್ ನೋಡಿ ರಹಸ್ಯವಾಗಿ ವಿನ್ಯಾಸಗೊಳಿಸಲಾಗಿದ್ದರೂ ಆಶ್ಚರ್ಯವೇನಿಲ್ಲ ಎಂದು ಹೇಳಿರುವ ಅವರು, ಹರ್ಷೆಲ್‌ ಪಟೇಲ್‌ ಬೌಲಿಂಗ್‌ನ್ನು ಕೂಡಾ ಹೊಗಳಿದ್ದಾರೆ.

 

ಹುಬ್ಬಳ್ಳಿ: ಪೆಟ್ರೋಲ್ ಬಂಕ್‌ನಲ್ಲಿಯೇ ವ್ಯಾನ್‌ಗೆ ಬೆಂಕಿ