ವಧುವಿಗೆ ಕೋವಿಡ್ ಪಾಸಿಟಿವ್- ಪಿಪಿಇ ಕಿಟ್‌ ಧರಿಸಿ ಸಪ್ತಪದಿ ತುಳಿದ ನವ ಜೋಡಿ - BC Suddi
ವಧುವಿಗೆ ಕೋವಿಡ್ ಪಾಸಿಟಿವ್- ಪಿಪಿಇ ಕಿಟ್‌ ಧರಿಸಿ ಸಪ್ತಪದಿ ತುಳಿದ ನವ ಜೋಡಿ

ವಧುವಿಗೆ ಕೋವಿಡ್ ಪಾಸಿಟಿವ್- ಪಿಪಿಇ ಕಿಟ್‌ ಧರಿಸಿ ಸಪ್ತಪದಿ ತುಳಿದ ನವ ಜೋಡಿ

ಭೋಪಾಲ್: ವಧುವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವರ-ವಧು ಇಬ್ಬರೂ ಪಿಪಿಇ ಕಿಟ್ ಧರಿಸಿ ಮದುವೆಯಾದ ಪ್ರಸಂಗವೊಂದು ಮಧ್ಯಪ್ರದೇಶದ ರತ್ಲಾಂ ಎಂಬಲ್ಲಿ ನಡೆದಿದೆ.

ನವ ಜೋಡಿಯ ಮದುವೆಯು ಏಪ್ರಿಲ್ 26 (ಸೋಮವಾರ) ನಿಗದಿಯಾಗಿತ್ತು. ಆದರೆ ಏಪ್ರಿಲ್ 19ರಂದು ವಧು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾಗ ರಿಪೋರ್ಟ್ ಪಾಸಿಟಿವ್ ಬಂದಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಮದುವೆ ನಿಲ್ಲಿಸಲು ಸ್ಥಳೀಯ ಆಡಳಿತವೂ ಮುಂದಾಗಿತ್ತು. ಆದರೆ ಒತ್ತಾಯದ ಮೇರೆಗೆ ಹಾಗೂ ಹಿರಿಯ ಅಧಿಕಾರಿಗಳ ನಿರ್ದೇಶನದಲ್ಲಿ ಮದುವೆ ಕಾರ್ಯ ನಡೆಸಲಾಯಿತು. ಸೋಂಕು ಹರಡದಂತೆ ಇಬ್ಬರಿಗೂ ಪಿಪಿಇ ಕಿಟ್ ಧರಿಸಲು ನಿರ್ದೇಶನ ನೀಡಿ ಶೀಘ್ರವೇ ಮದುವೆ ಮಾಡಲಾಗಿದೆ ಎಂದು ರತ್ಲಾಂ ತಹಸಿಲ್‌ದಾರ್ ನವೀನ್ ಗರ್ಗ್ ಮಾಹಿತಿ ನೀಡಿದ್ದಾರೆ.

ಜೋಡಿಯು ಪಿಪಿಇ ಕಿಟ್ ಧರಿಸಿಯೇ ಸಪ್ತಪದಿ ತುಳಿದಿದ್ದಾರೆ. ಮದುವೆಯಲ್ಲಿ ಕೆಲವು ಸಂಬಂಧಿಗಳು ಹಾಗೂ ಪೊಲೀಸರು ಇದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.