ಏ. 11ರಂದು ಕೆ-ಸೆಟ್ ಪರೀಕ್ಷೆ - BC Suddi
ಏ. 11ರಂದು ಕೆ-ಸೆಟ್ ಪರೀಕ್ಷೆ

ಏ. 11ರಂದು ಕೆ-ಸೆಟ್ ಪರೀಕ್ಷೆ

 

ಚಿತ್ರದುರ್ಗ: ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು 2021ರ ಏಪ್ರಿಲ್ 11ರಂದು ನಡೆಸಲಾಗುತ್ತಿದೆ. ದಾವಣಗೆರೆ ನಗರದಲ್ಲಿ ಒಟ್ಟು 9 ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪರೀಕ್ಷೆಗೆ ಸಂಬಂಧಿಸಿದ ಸೂಚನೆ, ಪ್ರವೇಶ ಪತ್ರ ಹಾಗೂ ಇನ್ನಿತರ ಮಾಹಿತಿಯನ್ನು ಕೆ-ಸ್ಲೆಟ್ ಅಂತರ್ಜಾಲ (http:/kset.uni.mysore.ac.in)  ಇಲ್ಲಿಗೆ ಕಳುಹಿಸಲಾಗಿದೆ. ಅಭ್ಯರ್ಥಿಗಳು ಪ್ರವೇಶಪತ್ರವನ್ನು ಡೌನ್‍ಲೋಡ್ ಮಾಡಿಕೊಂಡು, ಭಾವಚಿತ್ರವಿರುವ ಗುರುತಿನಚೀಟಿಯನ್ನು ಪರೀಕ್ಷೆಗೆ ಬರುವಾಗತರಬೇಕು. ಪ್ರವೇಶಪತ್ರವಿಲ್ಲದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ನೋಡಲ್‍ಅಧಿಕಾರಿ ಪ್ರೊ.ಜೆ.ಕೆ.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿಗಳು ಪರೀಕ್ಷೆಗೆ ಅರ್ಧಗಂಟೆ ಮುಂಚೆ ಹಾಜರಿರಬೇಕು, ಸಾಮಾಜಿಕಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್‍ಧರಿಸುವುದನ್ನುಕಡ್ಡಾಯ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರಬಾರದು ಎಂದು ಸೂಚಿಸಿದ್ದಾರೆ.

ದಾವಣಗೆರೆಯ ಪರೀಕ್ಷಾ ಕೇಂದ್ರಗಳು: 1. ಎಸ್‍ಬಿಸಿ ಮಹಿಳಾ ಪ್ರಥಮದರ್ಜೆಕಾಲೇಜು 2. ಬಿ.ಎಸ್. ಚನ್ನಬಸಪ್ಪ ಪ್ರಥಮದರ್ಜೆಕಾಲೇಜು, 3.ಬಾಪೂಜಿಎಂಜಿನಿಯರಿಂಗ್ ಮತ್ತುತಂತ್ರಜ್ಞಾನಕಾಲೇಜು, 4.ಸರ್ಕಾರಿ ಪ್ರಥಮದರ್ಜೆಕಾಲೇಜು, 5.ಎ.ಆರ್.ಜಿ. ಕಲಾ ಮತ್ತು ವಾಣಿಜ್ಯಕಾಲೇಜು, 6.ಎ.ವಿ. ಕಮಲಮ್ಮ ಮಹಿಳಾ ಕಾಲೇಜು, 7.ಜಿ.ಎಂ. ಇನ್‍ಸ್ಟಿಟ್ಯೂಟ್ ಆಫ್‍ಟೆಕ್ನಾಲಜಿ, 8. ಜಿ.ಎಂ.ಎಸ್‍ಅಕಾಡೆಮಿ ಪ್ರಥಮದರ್ಜೆಕಾಲೇಜು, 9.ದವನ್ ನೂತನ್‍ಅಲಯನ್ಸ್ ನೂತನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್.

error: Content is protected !!