8ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಸಮರ : ಕುಟುಂಬದವರಿಂದ ಭಿಕ್ಷಾಟನೆ - BC Suddi
8ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಸಮರ : ಕುಟುಂಬದವರಿಂದ ಭಿಕ್ಷಾಟನೆ

8ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಸಮರ : ಕುಟುಂಬದವರಿಂದ ಭಿಕ್ಷಾಟನೆ

ಬೆಳಗಾವಿ: ಸರ್ಕಾರ ಮತ್ತು ಸಾರಿಗೆ ನೌಕರರ ಮಧ್ಯೆ ನಡೆಯುತ್ತಿರುವ 6ನೇ ವೇತನದ ಹಗ್ಗಾ ಜಗ್ಗಾಟ ಮುಂದುವರೆದಿದೆ. ಮುಷ್ಕರ ಇಂದಿಗೆ 8 ದಿನಕ್ಕೆ ಪಾದಾರ್ಪಣೆ ಮಾಡಿದೆ. ಮಂಗಳವಾರ 7 ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಸಾರಿಗೆ ನೌಕರರ ಕುಟುಂಬದವರು ಭಿಕ್ಷೆ ಬೇಡಿ ಪ್ರತಿಭಟಿಸಿದರು.

ಈ ನಡುವೆ ಕೆಲವು ಚಾಲಕರು, ನಿರ್ವಾಹಕರು ಕೆಲಸಕ್ಕೆ ಹಾಜರಾಗಿದ್ದು, ಬಸ್ ಸಂಚಾರ ಸೇವೆಯೂ ಆರಂಭವಾಗಿದೆ.
ಪ್ರತಿಭಟನೆ ನಿರತ ನೌಕರರ ಕುಟುಂಬದವರು ಸರ್ಕಾರದಿಂದ ಸಹಕಾರದೊರೆಯುತ್ತಿಲ್ಲವಾದರಿಂದ ನಮಗೆ ಭಿಕ್ಷಾಟನೆಗೂ, ಪ್ರತಿಭಟನೆಗೂ ಅನುಮತಿ ನೀಡಬೇಕು ಎನ್ನುತ್ತಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರಿಸಿ ನಮ್ಮನ್ನು ಉಳಿಸಿರಿ’ ಎಂದು ಕೋರುತ್ತಿದ್ದಾರೆ.

ನಾಕೊಡೆ ನೀ ಬಿಡೆ ಎನ್ನುವ ಸರ್ಕಾರ ಮತ್ತು ನೌಕರರ ಗುದ್ದಾಟದಲ್ಲಿ ಒಂದಕ್ಕೆ ಎರಡಷ್ಟು ಹಣ ಕೊಟ್ಟು ಪರದಾಡುವ ಪಾಡು ಜನಸಾಮಾನ್ಯರದ್ದು.

IPL 2021: KKR ವಿರುದ್ಧ 10 ರನ್ ಗಳಿಂದ ಮುಂಬೈಗೆ ರೋಚಕ ಜಯ