ದೇಶದಲ್ಲಿ ನಿಲ್ಲದ ಕೊರೊನಾ ಅಬ್ಬರ: ಇಂದು 1,31,968 ಮಂದಿಗೆ ಪಾಸಿಟಿವ್- 780 ಜನ ಬಲಿ - BC Suddi
ದೇಶದಲ್ಲಿ ನಿಲ್ಲದ ಕೊರೊನಾ ಅಬ್ಬರ: ಇಂದು 1,31,968 ಮಂದಿಗೆ ಪಾಸಿಟಿವ್- 780 ಜನ ಬಲಿ

ದೇಶದಲ್ಲಿ ನಿಲ್ಲದ ಕೊರೊನಾ ಅಬ್ಬರ: ಇಂದು 1,31,968 ಮಂದಿಗೆ ಪಾಸಿಟಿವ್- 780 ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಕಂಟಕ ಜನರ ನೆಮ್ಮದಿ ಕಸಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 1,31,968 ಸೋಂಕು ಪ್ರಕರಣಗಳು ಬೆಳಕಿಗೆ ಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,30,60,542ಕ್ಕೆ ಏರಿಕೆಯಾಗಿದೆ. ನಿನ್ನೆಯಿಂದ ಸೋಂಕಿಗೆ 780 ಮಂದಿ ಬಲಿಯಾಗಿದ್ದು, 61,899 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ ಮಹಾಮಾರಿಗೆ ಬಲಿಯಾದವರ ಸಂಖ್ಯೆ 1,67,642ರಷ್ಟಾಗಿದರೆ, ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 1,19,13,292ರಷ್ಟಿದೆ. ದೇಶದಲ್ಲಿ ಇನ್ನೂ 9,79,608 ಸಕ್ರಿಯ ಪ್ರಕರಣಗಳಿದ್ದು, 9,43,34,262 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ.

ಅರ್ಜುನ್​ ಜನ್ಯಗೆ ಕೊರೊನಾ ದೃಢ, ಆಸ್ಪತ್ರೆಗೆ ದಾಖಲು

error: Content is protected !!