60 ಕೆ.ಜಿ. ತೂಕದ ಜಂಬೊ ಸಿಲಿಂಡರ್ ಬೆಲೆ ಎಷ್ಟು ಗೊತ್ತಾ..? - BC Suddi
60 ಕೆ.ಜಿ. ತೂಕದ ಜಂಬೊ ಸಿಲಿಂಡರ್ ಬೆಲೆ ಎಷ್ಟು ಗೊತ್ತಾ..?

60 ಕೆ.ಜಿ. ತೂಕದ ಜಂಬೊ ಸಿಲಿಂಡರ್ ಬೆಲೆ ಎಷ್ಟು ಗೊತ್ತಾ..?

ಆನೇಕಲ್: ಕಾಲ ಕೆಟ್ಟಿರುವುದಕ್ಕೆ ಕೊರೊನಾ ವಕ್ಕರಿಸಿದೆ ಎನ್ನುವ ಅನುಭವಸ್ಥರ ಮಾತು ಇಲ್ಲಿ ದೃಢ ಎನಿಸುತ್ತಿದೆ. ಪ್ರಾಣ ವಾಯುವಿಗಾಗಿ ವಿಲ ವಿಲನೇ ಒದ್ದಾಡುತ್ತಿರುವ ದೃಶ್ಯ ಕಣ್ಣ ಮುಂದೆ ಇದ್ದರು ಆಕ್ಸಿಜನ್ ನಲ್ಲಿಯೂ ಗೋಲ್ ಮಾಲ್ ಮಾಡುವವರಿಗೆ ಏನ್ ಹೇಳಬೇಕೊ ತಿಳಿಯುತ್ತಿಲ್ಲ.

ಆಸ್ಪತ್ರೆಯಲ್ಲಿ ಹಾಸಿಗೆ ಇದ್ದರು ಆಕ್ಸಿಜನ್ ಇಲ್ಲದೆ ನರಳಾಟ ನಡೆಸಿ ಕೊನೆಯುಸಿರೆಳೆಯುವವರ ಕೂಗು ಇಂತಹ ದುರುಳರಿಗೆ ಕಾಣದಿರುವುದು ವಿಪರ್ಯಾಸವಲ್ಲದೆ ಮತ್ತೇನು? ಹೌದು ಆನೇಕಲ್ ತಾಲೂಕಿನಲ್ಲಿ ಸಿಲಿಂಡರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಆರೋಪಗಳು ಕೇಳಿಬಂದಿವೆ.

60 ಕೆ.ಜಿ. ತೂಕದ ಜಂಬೊ ಸಿಲಿಂಡರ್ ಗೆ ಮಾರುಕಟ್ಟೆಯಲ್ಲಿ 1200 ರೂ. ನಿಂದ 1500 ರೂ.ವರೆಗೆ ದರವಿದ್ದು, ಕಾಳಸಂತೆಯಲ್ಲಿ ತಲಾ ಸಿಲಿಂಡರ್ ಒಂದಕ್ಕೆ 9000 ರೂಪಾಯಿಂತೆ ಮಾರಾಟ ಮಾಡಲಾಗುತ್ತಿದೆ ಎಂದು ವೈದ್ಯರೊಬ್ಬರು ಆರೋಪಿಸಿದ್ದಾರೆ. ಆಕ್ಸಿಜನ್ ಕೊರತೆಯಿಂದಾಗಿ ನಮಗೂ ಕಾಳಸಂತೆಯಲ್ಲಿ ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಮಂಗಳವಾರ ಬೆಳಗ್ಗೆ 9000 ರೂ. ಕೊಟ್ಟು 10 ಸಿಲಿಂಡರ್ ಖರೀಸಿದ್ದೇವೆ ಎಂದು ಇಲ್ಲಿನ ಮಿತ್ರ ಆಸ್ಪತ್ರೆಯ ಡಾ. ಭರತ್ ಮಾಹಿತಿ ನೀಡಿದ್ದಾರೆ.

ಕೊರೊನಾ ಎರಡನೇ ಅಲೆಯ ಮುನ್ನ ಖಾಸಗಿ ಹಾಗೂ ಸರಕಾರದ 20 ಆಸ್ಪತ್ರೆಗಳಿಗೆ ನಿತ್ಯ 60 ಕೆ.ಜಿ ತೂಕದ 200 ಸಿಲಿಂಡರ್ ಬೇಕಾಗುತ್ತಿತ್ತು. ಇದೀಗ ದಿನಕ್ಕೆ 600 ಸಿಲಿಂಡರ್ ಬೇಕಾಗುತ್ತಿದೆ. ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿ ಅಗತ್ಯವಿರುವಷ್ಟು ಸಿಲಿಂಡರ್ ಗಳನ್ನು ಭರ್ತಿ ಮಾಡಿಕೊಡುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆ: ರಾಜ್ಯದಲ್ಲಿ 14 ಟಫ್ ರೂಲ್ಸ್‌ ಜಾರಿ