ದೇಶದ 48ನೇ ಸಿಜಿಐ ಆಗಿ ನ್ಯಾ. ಎನ್‌.ವಿ. ರಮಣ ಇಂದು ಅಧಿಕಾರ ಸ್ವೀಕಾರ - BC Suddi
ದೇಶದ 48ನೇ ಸಿಜಿಐ ಆಗಿ ನ್ಯಾ. ಎನ್‌.ವಿ. ರಮಣ ಇಂದು ಅಧಿಕಾರ ಸ್ವೀಕಾರ

ದೇಶದ 48ನೇ ಸಿಜಿಐ ಆಗಿ ನ್ಯಾ. ಎನ್‌.ವಿ. ರಮಣ ಇಂದು ಅಧಿಕಾರ ಸ್ವೀಕಾರ

ನವದೆಹಲಿ: ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಸ್​.ಎ ಬೋಬ್ಡೆ ನಿನ್ನೆ ನಿವೃತ್ತರಾಗಿದ್ದು, ಅವರ ಉತ್ತರಾಧಿಕಾರಿಯಾಗಿ ಹಿರಿಯ ನ್ಯಾಯಾಮೂರ್ತಿ ಎನ್​.ವಿ. ರಮಣ ಅವರು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಮೂಲಕ ನ್ಯಾಯಾಮೂರ್ತಿ ರಮಣ ಅವರು ದೇಶದ 48ನೇ ಸಿಜೆಐ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. 2022ರ ಆಗಸ್ಟ್ 26 ರವರೆಗೂ ರಮಣ ಅವರು ಸಿಜೆಐ ಆಗಿರಲಿದ್ದಾರೆ.

ಆಂಧ್ರಪ್ರದೇಶದ ಪೊನ್ನಾವರಂ ಗ್ರಾಮದಲ್ಲಿ 1957ರ ಆಗಸ್ಟ್​ 27ರಂದು ಜನಿಸಿದ ಎನ್​.ವಿ.ರಮಣ ಅವರು 1983ರ ಫೆಬ್ರವರಿ 10ರಿಂದ ವಕೀಲಿ ವೃತ್ತಿ ಪ್ರಾರಂಭಿಸಿದರು. 2000ರ ಜೂನ್​ 27ರಂದು ಆಂಧ್ರಪ್ರದೇಶ ಹೈಕೋರ್ಟ್​​ನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡರು. 2014ರ ಫೆಬ್ರವರಿ 17ರಂದು ಸುಪ್ರಿಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು. ಕಳೆದ ವರ್ಷ ಅಕ್ಟೋಬರ್​ನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್​.ಜಗನ್​ ಮೋಹನ್​ ರೆಡ್ಡಿ ಮತ್ತು ಎನ್​.ವಿ.ರಮಣ ಮಧ್ಯೆ ವಿವಾದವೊಂದು ಎದ್ದಿತ್ತು. ಜಗನ್​ ಮೋಹನ್​ ರೆಡ್ಡಿಯವರು ರಮಣ ವಿರುದ್ಧ ಗಂಭೀರ ಆರೋಪ ಮಾಡಿ, ಸಿಜೆಐ ಬೋಬ್ಡೆಯವರಿಗೆ ಪತ್ರ ಬರೆದಿದ್ದರು. ಇತ್ತೀಚೆಗಷ್ಟೇ ಈ ಆರೋಪದಿಂದ ಇವರಿಗೆ ಕ್ಲೀನ್​ಚಿಟ್​ ಪಡೆದಿದ್ದಾರೆ.