ಸೆಕ್ಸ್‌ ಸಿಡಿ ಕೇಸ್: ಆರೋಪಿಗಳ ಬ್ಯಾಂಕ್ ಖಾತೆಗೆ 40 ಲಕ್ಷ ಜಮೆ - BC Suddi
ಸೆಕ್ಸ್‌ ಸಿಡಿ ಕೇಸ್: ಆರೋಪಿಗಳ ಬ್ಯಾಂಕ್ ಖಾತೆಗೆ 40 ಲಕ್ಷ ಜಮೆ

ಸೆಕ್ಸ್‌ ಸಿಡಿ ಕೇಸ್: ಆರೋಪಿಗಳ ಬ್ಯಾಂಕ್ ಖಾತೆಗೆ 40 ಲಕ್ಷ ಜಮೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ಸೆಕ್ಸ್‌ ಸಿಡಿ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಸಂಬಂಧ ತನಿಖೆ ತೀವ್ರಗೊಳಿಸಿರುವ ಎಸ್‌ಐಟಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ.

ಹೌದು. ಸಿಡಿ ಹಿಂದಿನ ಸೂತ್ರದಾರ ಹ್ಯಾಕರ್ ಶ್ರವಣ್ ಅಣ್ಣನ ಬ್ಯಾಂಕ್ ಖಾತೆಗೆ ದಿಢೀರ್ 40 ಲಕ್ಷ ಹಣ ಬಂದಿದ್ದರ ಬಗ್ಗೆ ಎಸ್‍ಐಟಿ ತನಿಖೆ ನಡೆಸುತ್ತಿದೆ. ಐದೈದು ಲಕ್ಷದಂತೆ ಐದಾರು ಬಾರಿ ಹ್ಯಾಕರ್ ಅಣ್ಣನ ಅಕೌಂಟ್‌ಗೆ ಹಣ ಬಂದಿದ್ದು, ಇವರೇ ಡಿಪಾಸಿಟ್ ಮಾಡಿದ್ದಾರೆ ಅನ್ನೋ ಗುಮಾನಿ ಎದ್ದಿದೆ.

ವಿಚಾರಣೆ ವೇಳೆ ಆರೋಪಿ ಶ್ರವಣ್ ಅಣ್ಣ, ಮನೆ ಪಕ್ಕದ ಸೈಟ್ ಖರೀದಿಗೆ ಹಣ ಹೊಂದಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಯಾರು ಕೊಟ್ಟರು ಅಂತ ಕೇಳಿದರೆ ಸಾಲ ತಂದಿರುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ.

ಸದ್ಯ ಎಸ್‍ಐಟಿ 40 ಲಕ್ಷದ ಡಿಡಿ ಹಾಗೂ ಚೆಕ್ ಸೀಜ್ ಮಾಡಿಕೊಂಡು ಬಂದಿದೆ. ಕಳೆದ ಮೂರು ದಿನಗಳಿಂದ ಹ್ಯಾಕರ್ ವಿಚಾರಣೆ ನಡೆಸುತ್ತಿರುವ ಎಸ್‍ಐಟಿಗೆ ಏಕಾಏಕಿ ಇಷ್ಟು ಹಣ ಬಂದಿದ್ದರ ಬಗ್ಗೆ ಹ್ಯಾಕರ್ ಬ್ರದರ್ ಸರಿಯಾದ ಉತ್ತರ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ.

error: Content is protected !!