37 ದಿನದಲ್ಲಿ ಒಬ್ಬಳನ್ನೇ 4 ಬಾರಿ ಮದ್ವೆಯಾದ ಬ್ಯಾಂಕ್ ಕ್ಲರ್ಕ್..!- ಯಾಕೆ ಗೊತ್ತಾ? - BC Suddi
37 ದಿನದಲ್ಲಿ ಒಬ್ಬಳನ್ನೇ 4 ಬಾರಿ ಮದ್ವೆಯಾದ ಬ್ಯಾಂಕ್ ಕ್ಲರ್ಕ್..!- ಯಾಕೆ ಗೊತ್ತಾ?

37 ದಿನದಲ್ಲಿ ಒಬ್ಬಳನ್ನೇ 4 ಬಾರಿ ಮದ್ವೆಯಾದ ಬ್ಯಾಂಕ್ ಕ್ಲರ್ಕ್..!- ಯಾಕೆ ಗೊತ್ತಾ?

ತೈವಾನ್: ಇಲ್ಲಿನ ಬ್ಯಾಂಕ್‌ವೊಂದರ ಗುಮಾಸ್ತ (ಕ್ಲರ್ಕ್) ಕೇವಲ 37 ದಿನದಲ್ಲಿ ಒಬ್ಬಳನ್ನೇ ನಾಲ್ಕು ಬಾರಿ ಮದುವೆಯಾಗಿದ್ದಾರೆ. ಇದು ನಿಮ್ಮಲ್ಲಿ ಅಚ್ಚರಿ ಮೂಡಿಸಿರಬಹುದು. ಅಷ್ಟಕ್ಕೂ ಆ ವ್ಯಕ್ತಿ ಹೀಗೆ ಮಾಡಲು ಕಾರಣ ತಿಳಿಯಬೇಕಾ?

ಕೆಲಸದ ಒತ್ತಡಗಳ ಮಧ್ಯೆ ರಜೆ ಪಡೆಯಲು ಉದ್ಯೋಗಿಗಳು ನಾನಾ ಕಸರತ್ತು ಮಾಡಬೇಕಾಗುತ್ತದೆ. ಉದ್ಯೋಗಿಗಳು ತಮ್ಮ ಹಿರಿಯ ಅಧಿಕಾರಿಗಳಿಂದ ರಜೆ ಕೇಳಿ ಪಡೆದು ಕೊಳ್ಳುವುದು ಸಾಹಸದ ಕೆಲಸವೇ ಸರಿ. ಹೀಗೆ ರಜೆ ಪಡೆಯಲು ಬ್ಯಾಕ್ ಕ್ಲರ್ಕ್ ನಾಲ್ಕು ಬಾರಿ ಮದುವೆಯಾಗಿದ್ದಾನೆ.

ತೈವಾನ್ ದೇಶದ ಅಕಾನೂನಿನ ಪ್ರಕಾರ, ನೌಕರರು ಮದುವೆಯಾದಾಗ ಎಂಟು ದಿನಗಳ ವೇತನ ಸಹಿತ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಹಾಗಾಗಿ 4 ಬಾರಿ ಮದುವೆಯಾದ ಈ ವ್ಯಕ್ತಿಗೆ 32 ದಿನಗಳ ರಜೆ ಸಿಗಬೇಕಾಗಿರುವುದು ಕಾನೂನು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ವ್ಯಕ್ತಿ, ಇಂಥದ್ದೊಂದು ಮೋಸದಾಟಕ್ಕೆ ಮುಂದಾಗಿದ್ದ. ಬ್ಯಾಂಕ್ ರಜೆ ನೀಡಲು ನಿರಾಕರಿಸಿದ ಬ್ಯಾಂಕ್ ವಿರುದ್ಧವೇ ಕೇಸ್ ಕೂಡ ದಾಖಲಿಸಿದ್ದಾನೆ. ನನಗೆ ರಜೆ ನಿರಾಕರಿಸುವುದರ ಮೂಲಕ ಬ್ಯಾಂಕ್ ತೈವಾನ್ ಕಾರ್ಮಿಕ ನಿಯಮದನ್ವಯ ಆರ್ಟಿಕಲ್ 2ರ ನಿಮಯವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾನೆ.

ಲಕ್ನೋ, ನೋಯ್ಡಾದಲ್ಲಿ ರಾತ್ರಿ ಕರ್ಫ್ಯೂ ಅವಧಿ ವಿಸ್ತರಣೆ – ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಮುಂದೂಡಿಕೆ