ಕೆಎಲ್ ಭರ್ಜರಿ ಶತಕ- ಪಂತ್, ಕೊಹ್ಲಿ ಅರ್ಧಶತಕ: ಇಂಗ್ಲೆಂಡ್‌ಗೆ 337 ರನ್‌ಗಳ ಗುರಿ - BC Suddi
ಕೆಎಲ್ ಭರ್ಜರಿ ಶತಕ- ಪಂತ್, ಕೊಹ್ಲಿ ಅರ್ಧಶತಕ: ಇಂಗ್ಲೆಂಡ್‌ಗೆ 337 ರನ್‌ಗಳ ಗುರಿ

ಕೆಎಲ್ ಭರ್ಜರಿ ಶತಕ- ಪಂತ್, ಕೊಹ್ಲಿ ಅರ್ಧಶತಕ: ಇಂಗ್ಲೆಂಡ್‌ಗೆ 337 ರನ್‌ಗಳ ಗುರಿ

ಪುಣೆ: ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಶತಕ, ರಿಷಬ್ ಪಂತ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದಿಂದ ಭಾರತ ತಂಡವು ಇಂಗ್ಲೆಂಡ್ 337 ರನ್​ಗಳ ಗುರಿ ನೀಡಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಭಾರತವು ಕೆ.ಎಲ್.ರಾಹುಲ್ 108 ರನ್, ರಿಷಬ್ ಪಂತ್ 77 ರನ್, ವಿರಾಟ್ ಕೊಹ್ಲಿ 66 ರನ್, ಹಾರ್ದಿಕ್ ಪಾಂಡ್ಯ 35 ರನ್ ಸಹಾಯದಿಂದ 6 ವಿಕೆಟ್‌ ನಷ್ಟಕ್ಕೆ 336 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ 37 ರನ್‌ಗೆ ಶಿಖರ್ ಧವನ್ (4 ರನ್) ಹಾಗೂ ರೋಹಿತ್ ಶರ್ಮಾ (25 ರನ್) ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಈ ವೇಳೆ ವಿರಾಟ್ ಕೊಹ್ಲಿ ಜೊತೆಗೂಡಿದ ಕೆ.ಎಲ್‌.ರಾಹುಲ್ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಈ ಜೋಡಿಯು ಮೂರನೇ ವಿಕೆಟ್ ನಷ್ಟಕ್ಕೆ 121 ರನ್‌ಗಳ ಕೊಡುಗೆ ನೀಡಿತು. ವಿರಾಟ್ ವಿಕೆಟ್ ಬಳಿಕ ಮೈದಾನಕ್ಕಿಳಿದ ರಿಷಬ್ ಪಂತ್ ತಂಡದ ಮೊತ್ತವನ್ನು ಏರಿಸಿದರು.

ಶತಕ ಪೂರೈಸಿ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾದ ಕೆ.ಎಲ್.ರಾಹುಲ್ (108 ರನ್) ವಿಕೆಟ್‌ ಕಳೆದುಕೊಂಡರು. ಈ ಬೆನ್ನಲ್ಲೇ ರಿಷಬ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಈ ಮೂಲಕ ಭಾರತ 6 ವಿಕೆಟ್‌ ನಷ್ಟಕ್ಕೆ 336 ರನ್ ಗಳಿಸಿ, ಇಂಗ್ಲೆಂಡ್‌ಗೆ ಸಾಧಾರಣ ಮೊತ್ತದ ಸವಾಲು ನೀಡಿದೆ.

‘ನಮ್ಮ ಆಟ ಶುರು, ಸರ್ಕಾರವನ್ನೇ ಉರುಳಿಸಿದವರಿಗೆ ಇದ್ಯಾವ ಲೆಕ್ಕ?’ – ರಮೇಶ್ ಜಾರಕಿಹೊಳಿ

error: Content is protected !!