ಜಾಗತಿಕ ದಾಖಲೆ- ಒಂದೇ ದಿನ 3.32 ಲಕ್ಷ ಕೊರೊನಾ ಪ್ರಕರಣ ಪತ್ತೆ - BC Suddi
ಜಾಗತಿಕ ದಾಖಲೆ- ಒಂದೇ ದಿನ 3.32 ಲಕ್ಷ ಕೊರೊನಾ ಪ್ರಕರಣ ಪತ್ತೆ

ಜಾಗತಿಕ ದಾಖಲೆ- ಒಂದೇ ದಿನ 3.32 ಲಕ್ಷ ಕೊರೊನಾ ಪ್ರಕರಣ ಪತ್ತೆ

ನವದೆಹಲಿ: ದೇಶದಲ್ಲಿ ಹೊಸದಾಗಿ ಏಕದಿನದಲ್ಲಿ ಬರೋಬ್ಬರಿ 3.32 ಲಕ್ಷ ಪ್ರಕರಣಗಳು ಪತ್ತೆಯಾಗುವುದರ ಮೂಲಕ ಕೊರೋನಾ ವೈರಸ್‌ ಮತ್ತೊಂದು ಜಾಗತಿಕ ದಾಖಲೆ ಸೃಷ್ಟಿಸಿದೆ . ಕೇವಲ 24 ತಾಸುಗಳ ಅವಧಿಯಲ್ಲಿ ಈ ಪ್ರಮಾಣದ ಕೇಸುಗಳು ಒಂದು ದೇಶದಲ್ಲಿ ಪತ್ತೆಯಾಗಿರುವುದು ವಿಶ್ವದಲ್ಲಿಯೇ ಮೊದಲಾಗಿದೆ.

ಈ ಹಿಂದೆ ಜ.8ರಂದು ಅಮೆರಿಕದಲ್ಲಿ 3.07 ಲಕ್ಷ ಕೇಸುಗಳು ದೃಢಪಟ್ಟಿದ್ದವು. ಆದರೆ ಈ ದಾಖಲೆಯನ್ನು ಬುಧವಾರ 3.14 ಲಕ್ಷ ಪ್ರಕರಣಗಳ ಪತ್ತೆ ಮೂಲಕ ಮೂಲಕ ಅಳಿಸಿ ಹಾಕಿತ್ತು. ಗುರುವಾರವೂ ಭಾರತದಲ್ಲಿ ಸೋಂಕಿನ ಪ್ರಮಾಣ ಏರುಗತಿಯಲ್ಲಿ ಮುಂದವರಿದಿದ್ದು, ಇನ್ನೂ 18 ಸಾವಿರ ಹೆಚ್ಚು ಕೇಸುಗಳೊಂದಿಗೆ 3.32 ಲಕ್ಷ ಹೊಸ ಪ್ರಕರಣಗಳು ದೃಢಪಟ್ಟಿವೆ

ಇನ್ನು ಗುರುವಾರ ದೇಶದಲ್ಲಿ 2,365 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದ ಮಟ್ಟಿಗೆ ಇದೂ ಈವರೆಗಿನ ದಾಖಲೆಯಾಗಿದೆ. ಸಾವಿಗೆ ಹೋಲಿಸಿದರೆ ಈವರೆಗೆ ಅತಿ ಹೆಚ್ಚು ಒಂದೇದಿನ ಸಾವು ಸಂಭವಿಸಿದ್ದು ಅಮೆರಿಕದಲ್ಲಿ. ಜ.12ರಂದು ಅಲ್ಲಿ 4493 ಜನ ಸಾವನ್ನಪ್ಪಿದ್ದರು.

‘ಕೊರೊನಾದ ಎರಡನೇ ಅಲೆಯಿಂದ ಆರ್ಥಿಕ ಬೆಳವಣಿಗೆಗೆ ಅಪಾಯ’ – ಶಕ್ತಿಕಾಂತ್‌ ದಾಸ್‌