ಬೆಂಗಳೂರು: ಇತ್ತೀಚಿಗೆ ಅಗಲಿದೆ ಕೆಜಿಎಫ್ನಿಂದ ಖ್ಯಾತಿ ಗಳಿಸಿದ್ದ ಮೋಹನ್ ಜುನೇಜಾ ಅವರ 3ಡಿ ಮೋಡೆಲ್ ತಯಾರಾಗಿದೆ. ಅಚ್ಚರಿ ಎಂದರೆ ಖ್ಯಾತ ನಟ ನಟಿಯರ, ರಾಜಕಾರಣಿಗಳ 3ಡಿ ಮೊಡೆಲ್ಗಳು ಮಾತ್ರ ತಯಾರಾಗುತ್ತಿದ್ದ ವೇಳೆ ಇದೀಗ ಪೋಷಕ ನಟರೊಬ್ಬರ ಚಿತ್ರ ಬೆಂಗಳೂರಲ್ಲಿ ನಿರ್ಮಾಣಗೊಂಡಿದೆ.
ಬೆಂಗಳೂರಿನ ಹೆಸರಾಂತ ಎಂಪಿಸಿ (ಮೂವಿಂಗ್ ಪಿಕ್ಚರ್ಸ್ ಕಂಪನಿ) ಈ 3ಡಿ ಆರ್ಟ್ ಪರಿಚಯಿಸಿದೆ. 3ಡಿ ಕಲಾವಿದ ಮಿಲಿಂದ್ ಸುತಾರ್ ಈ ಚಿತ್ರ ತಯಾರಿಸಿದ್ದಾರೆ.