ಮುಂಬೈ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮಾಸ್ಕ್ ಧರಿಸಿ ಸೆಲ್ಫಿ ಶೇರ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಕರೀನಾ ತಾವು ಮಾಸ್ಕ್ ಧರಿಸಿರುವ ಫೋಟೋವನ್ನು ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಇದು ಪ್ರಚಾರವಲ್ಲ, ಸುಮ್ಮನೆ ಮಾಸ್ಕ್ ಹಾಕ್ಕೊಳ್ಳಿ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಮಾಸ್ಕ್ ತುಂಬಾ ಸರಳ ಮತ್ತು ಸಿಂಪಲ್ ಎಂದು ಕಂಡರೂ ಅದರ ಬೆಲೆ ದುಬಾರಿ. ಈ ಮಾಸ್ಕ್ ಬೆಲೆ 25,994 ರೂ. ಆಗಿದೆ. ಕರೀನಾ ಅವರಲ್ಲದೆ, ದೀಪಿಕಾ ಪಡುಕೋಣೆ, ರಣಬೀರ್ ಕಪೂರ್ ಮುಂತಾದ ಹಲವಾರು ಪ್ರಸಿದ್ಧ ವ್ಯಕ್ತಿಗಳು ಈ ದುಬಾರಿ ಮಾಸ್ಕ್ ಧರಿಸಿದ್ದನ್ನು ಕಾಣಬಹುದು.