ಅಂಬಾನಿ ಕುಟುಂಬಸ್ಥರಿಗೆ 25 ಕೋಟಿ ರೂ. ದಂಡ ವಿಧಿಸಿದ 'ಸೆಬಿ' - BC Suddi
ಅಂಬಾನಿ ಕುಟುಂಬಸ್ಥರಿಗೆ 25 ಕೋಟಿ ರೂ. ದಂಡ ವಿಧಿಸಿದ ‘ಸೆಬಿ’

ಅಂಬಾನಿ ಕುಟುಂಬಸ್ಥರಿಗೆ 25 ಕೋಟಿ ರೂ. ದಂಡ ವಿಧಿಸಿದ ‘ಸೆಬಿ’

ಮುಂಬೈ:  ಉದ್ಯಮಿಗಳಾದ ಮುಕೇಶ್‌ ಮತ್ತು ಅನಿಲ್‌ ಅಂಬಾನಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) 2011 ರ ಸೆಬಿ ನಿಯಮಾವಳಿಗಳ ಉಲ್ಲಂಘನೆಗಾಗಿ 25 ಕೋಟಿ ರೂ. ದಂಡ ವಿಧಿಸಿದೆ.

38 ಹಂಚಿಕೆ ಘಟಕಗಳಿಗೆ ಪ್ರತಿ ಷೇರಿಗೆ 75 ರೂ ದರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ 12 ಕೋಟಿ ಷೇರುಗಳ ವಿತರಣೆಗೆ ಸಂಬಂಧಿಸಿ ಜನವರಿ 2000ರಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ಸೆಬಿ ತನಿಖೆ ನಡೆಸಿತ್ತು.

ಪಿಎಸಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಸಾರ್ವಜನಿಕ ಘೋಷಣೆ ಮಾಡದೆ, ಅಂಬಾನಿ ಕುಟುಂಬಸ್ಥರು 11(1)ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಸೆಬಿಯ ನ್ಯಾಯ ನಿರ್ಣಯ ಅಧಿಕಾರಿ ಕೆ ಸರವಣನ್‌ ಬುಧವಾರ ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಮುಕೇಶ್ ಮತ್ತು ಅನಿಲ್, ಅವರ ಪತ್ನಿಯರಾದ ನೀತಾ ಮತ್ತು ಟೀನಾ, ಮತ್ತು ಮುಖೇಶ್ ಮತ್ತು ನೀತಾ ಅಂಬಾನಿ ಮಕ್ಕಳಾದ ಆಕಾಶ್ ಮತ್ತು ಇಶಾ ಸೇರಿದಂತೆ 36 ಆರ್‌ಐಎಲ್ ಪ್ರವರ್ತಕರ ವಿರುದ್ಧ 2011 ರಲ್ಲಿ ನ್ಯಾಯ ನಿರ್ಣಯ ಪ್ರಕ್ರಿಯೆ ಆರಂಭಿಸಲಾಗಿತ್ತು.

ಸರವಣನ್‌ ಅವರು 1995ರ ಸೆಬಿ ನಿಯಮಾವಳಿಗಳು 1956ರ ಕಂಪೆನಿ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ತಿಳಿಸಿ ರೂ.25 ಕೋಟಿ ದಂಡ ವಿಧಿಸಿದರು.

error: Content is protected !!