ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,03,558 ಹೊಸ ಪ್ರಕರಣ ದಾಖಲು - BC Suddi
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,03,558 ಹೊಸ ಪ್ರಕರಣ ದಾಖಲು

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 1,03,558 ಹೊಸ ಪ್ರಕರಣ ದಾಖಲು

ನವದೆಹಲಿ: ದೇಶದಲ್ಲಿ ಮತ್ತೆ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು,ಇದೀಗ ಒಂದು ಲಕ್ಷ ದಾಟಿದೆ. ಕಳೆದ 24 ಗಂಟೆಯಲ್ಲಿ 1,03,558 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 478 ಮಂದಿ ಸಾವನ್ನಪ್ಪಿದ್ದಾರೆ.

ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾದ ದಿನನಿತ್ಯದ ಕೊರೊನಾ ಪ್ರಕರಣ ಇದಾಗಿದ್ದು, ಕಳೆದ ಸೆಪ್ಟೆಂಬರ್‌ 16ರಂದು 97,894 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಆ ಬಳಿಕ ಅತಿ ಹೆಚ್ಚು ದಾಖಲಾದ ಕೊರೊನಾ ಪ್ರಕರಣ ರವಿವಾರದ್ದಾಗಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್‌ ಬುಲೆಟಿನ್‌ನಲ್ಲಿ ಮಾಹಿತಿ ನೀಡಿದ್ದು, ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,25,89,067ಕ್ಕೆ ಏರಿಕೆಯಾಗಿದ್ದು, ಸದ್ಯಕ್ಕೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 7,41,830 ಆಗಿದೆ.

ಇನ್ನು ಕಳೆದ 24 ಗಂಟೆಯಲ್ಲಿ 478 ಮಂದಿ ಸಾವನ್ನಪ್ಪಿದ್ದು, ಇದುವರೆಗೂ ಒಟ್ಟು 1,65,101 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

 

ಎ.7ರಂದು ವಿದ್ಯಾರ್ಥಿಗಳ ಜೊತೆಗಿನ ಪರೀಕ್ಷಾ ಪೇ ಚರ್ಚಾ ವಾರ್ಷಿಕ ಸಂವಾದ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿ

error: Content is protected !!