ಮ್ಯಾಕ್ಸ್‌ವೆಲ್, ಎಬಿಡಿ ಸ್ಫೋಟಕ ಅರ್ಧಶತಕ- ಕೆಕೆಆರ್‌ಗೆ 205 ರನ್‌ಗಳ ಗುರಿ - BC Suddi
ಮ್ಯಾಕ್ಸ್‌ವೆಲ್, ಎಬಿಡಿ ಸ್ಫೋಟಕ ಅರ್ಧಶತಕ- ಕೆಕೆಆರ್‌ಗೆ 205 ರನ್‌ಗಳ ಗುರಿ

ಮ್ಯಾಕ್ಸ್‌ವೆಲ್, ಎಬಿಡಿ ಸ್ಫೋಟಕ ಅರ್ಧಶತಕ- ಕೆಕೆಆರ್‌ಗೆ 205 ರನ್‌ಗಳ ಗುರಿ

ಚೆನ್ನೈ: ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಸ್ಫೋಟಕ ಅರ್ಧಶತಕದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ 205 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದೆ.

ಚೆನ್ನೈನಲ್ಲಿ ನಡೆಯುತ್ತಿರುವ ಐಪಿಎಲ್ 14ನೇ ಆವೃತ್ತಿಯ 10ನೇ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಆರ್‌ಸಿಬಿ 4 ವಿಕೆಟ್‌ ನಷ್ಟಕ್ಕೆ 204 ರನ್‌ ಚಚ್ಚಿದೆ. ತಂಡದ ಪರ ಗ್ಲೇನ್ ಮ್ಯಾಕ್ಸ್‌ವೆಲ್ 78 ರನ್ (49 ಎಸೆತ, 9 ಬೌಂಡರಿ, 3 ಸಿಕ್ಸರ್) ಹಾಗೂ ಎಬಿ ಡಿವಿಲಿಯರ್ಸ್ ಅಜೇಯ 76 ರನ್ (34 ಎಸೆತ, 9 ಬೌಂಡರಿ, 3 ಸಿಕ್ಸರ್) ಹಾಗೂ ದೇವದತ್ ಪಡಿಕ್ಕಲ್ 25 ರನ್ (28 ಎಸೆತ, 2 ಬೌಂಡರಿ) ಗಳಿಸಿದರು.

ಸೇನಾ ಹೆಲಿಕಾಫ್ಟರ್‌ ಪತನ – ಐವರು ಸೈನಿಕರು ಮೃತ್ಯು