ಭಾರತದಲ್ಲಿ ಕೊರೊನಾ ರಣಕೇಕೆ : 24 ಗಂಟೆಯಲ್ಲಿ 2,023 ಜನ ಸಾವು - BC Suddi
ಭಾರತದಲ್ಲಿ ಕೊರೊನಾ ರಣಕೇಕೆ : 24 ಗಂಟೆಯಲ್ಲಿ 2,023 ಜನ ಸಾವು

ಭಾರತದಲ್ಲಿ ಕೊರೊನಾ ರಣಕೇಕೆ : 24 ಗಂಟೆಯಲ್ಲಿ 2,023 ಜನ ಸಾವು

ನವದೆಹಲಿ : ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಕೊರೊನಾ ರಣಕೇಕೆ ಹಾಕಿದೆ. ಈ ಅವಧಿಯಲ್ಲಿ ಬರೋಬ್ಬರಿ 2,95,041 ಮಂದಿಗೆ ಸೋಂಕು ಅಂಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,56,16,130ಕ್ಕೆ ಏರಿಕೆಯಾಗಿದೆ. ಇನ್ನು ಇದೇ ಟೈಮ್ ನಲ್ಲಿ ಸೋಂಕಿನಿಂದ ಬಳಲಿದ 2,023 ಮಂದಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸೋಂಕಿಗೆ ಬಲಿಯಾದವರ ಸಂಖ್ಯೆ 1,82,553ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 21,57,538ಕ್ಕೆ ಏರಿಕೆಯಾಗಿದೆ. ಈವರೆಗೂ ಚೇತರಿಸಿಕೊಂಡವರ 1,32,76,039ಕ್ಕೆ ತಲುಪಿದೆ.

ಈವರೆಗೆ 13,01,19,310 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ರಾಮನವಮಿ ಶುಭಾಶಯ ಕೋರಿದ ಪ್ರಧಾನಿ:ಕೊರೊನಾ ನಿಯಮ ಪಾಲಿಸುವಂತೆ ನಮೋ ಮನವಿ