ನವದೆಹಲಿ: ಯೂಟ್ಯೂಬ್ 2022ರಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಹಾಡಿನ ಪಟ್ಟಿಯನ್ನ ನೀಡಿದೆ. ಈ ವರ್ಷ ಅತಿ ಹೆಚ್ಚು ಜನ ಮೆಚ್ಚಿದ ಹಾಡು ರಶ್ಮಿಕಾ ಮಂದಣ್ಣ ಸೊಂಟ ಬಳುಕಿಸಿದ್ದ ಪುಷ್ಪ ಸಿನಿಮಾದ ಹಾಡು.
ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಸಿನಿಮಾದ ಸಾಮಿ ಸಾಮಿ. ಈ ಹಾಡು ಅತಿ ಹೆಚ್ಚು ಸಂಗೀತ ಪ್ರಿಯರ ಮನ ಗೆದ್ದು ನಂಬರ್ ಒನ್ ಸ್ಥಾನದಲ್ಲಿದೆ.
ಈ ಮೂಲಕ ಸೂಪರ್ ಹಿಟ್ ಆಗಿದ್ದ ಹೂಂ ಅಂಟಾವ ಮಾವ ಹಾಗು ವಿಕ್ರಾಂತ್ ರೋಣ ಸಿನಿಮಾದ ರಾರಾ ರಕ್ಕಮ್ಮ ಹಾಡುಗಳನ್ನು ಸಾಮಿ ಸಾಮಿ ಹಿಂದಿಕ್ಕಿದೆಯಂತೆ.!