ನೀಮಚ್: ಮಗಳ ಮದುವೆಗಾಗಿ ಮೀಸಲಿಟ್ಟಿದ್ದ 2 ಲಕ್ಷ ರೂ. ಅನ್ನು ಆಕ್ಸಿಜನ್ ಖರೀದಿಸಲು ದೇಣಿಗೆ ನೀಡಿದ ರೈತ - BC Suddi
ನೀಮಚ್: ಮಗಳ ಮದುವೆಗಾಗಿ ಮೀಸಲಿಟ್ಟಿದ್ದ 2 ಲಕ್ಷ ರೂ. ಅನ್ನು ಆಕ್ಸಿಜನ್ ಖರೀದಿಸಲು ದೇಣಿಗೆ ನೀಡಿದ ರೈತ

ನೀಮಚ್: ಮಗಳ ಮದುವೆಗಾಗಿ ಮೀಸಲಿಟ್ಟಿದ್ದ 2 ಲಕ್ಷ ರೂ. ಅನ್ನು ಆಕ್ಸಿಜನ್ ಖರೀದಿಸಲು ದೇಣಿಗೆ ನೀಡಿದ ರೈತ

ನೀಮಚ್: ದೇಶದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆಮ್ಲಜನಕ ಕೊರತೆಯ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರೈತರೊಬ್ಬರು ಆಮ್ಲಜನಕ ಖರೀದಿಸಲು ತಮ್ಮ ಮಗಳ ಅದ್ದೂರಿ ಮದುವೆಗಾಗಿ ಮೀಸಲಿಟ್ಟಿದ್ದ 2 ಲಕ್ಷರೂಪಾಯಿಗಳನ್ನು ಸ್ಥಳೀಯ ಆಡಳಿತಕ್ಕೆ ದೇಣಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಚಂಪಾಲಾಲ್ ಗುರ್ಜರ್ ಅವರು ಜಿಲ್ಲಾ ಆಸ್ಪತ್ರೆಗೆ ಒಂದು ಮತ್ತು ಅವರು ವಾಸಿಸುವ ಜೀರನ್ ತಹಸಿಲ್‌ಗೆ ಎರಡು ಸಿಲಿಂಡರ್ ವೈದ್ಯಕೀಯ ಆಮ್ಲಜನಕವನ್ನು ಖರೀದಿಸುವುದಕ್ಕಾಗಿ ಜಿಲ್ಲಾಧಿಕಾರಿ ಮಾಯಾಂಕ್ ಅಗರವಾಲ್ ಅವರಿಗೆ ಎರಡು ಲಕ್ಷ ರೂ ಚೆಕ್ ಹಸ್ತಾಂತರಿಸಿದ್ದಾರೆ.

ಮಗಳು ಅನಿತಾಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದು ಹಣ ಮೀಸಲಿಟ್ಟಿದ್ದೇ ಆದರೆ ಕೊರೊನಾ ಕಾರಣದಿಂದಾಗಿ ಅದ್ದೂರಿಯಾಗಿ ಮಾಡಲು ಆಗದಿದ್ದುದರಿಂದ ನನ್ನ ಮಗಳ ಮದುವೆಯನ್ನು ಸ್ಮರಣೀಯವಾಗಿಸಲು ನಾನು ಜಿಲ್ಲಾಡಳಿತಕ್ಕೆ ಎರಡು ಲಕ್ಷ ದೇಣಿಗೆ ನೀಡಿದ್ದೇನೆ, ಇದರಿಂದ ಅವರು ಎರಡು ಆಮ್ಲಜನಕ ಸಿಲಿಂಡರ್ ಗಳನ್ನು ಖರೀದಿಸಬಹುದು” ಎಂದು ಅವರು ಹೇಳಿದರು.

ಇನ್ನು “ತನ್ನ ತಂದೆಯ ಉದಾತ್ತ ಕಾರ್ಯದಿಂದ ಸಂತೋಷವಾಗಿದೆ, ಇದೀಗ ಕೊರೊನಾ ಪ್ರಕರಣಗಳ ಹೆಚ್ಚಳದಿಂದ ವೈದ್ಯಕೀಯ ಆಮ್ಲಜನಕದ ತೀವ್ರ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಪ್ರಕರಣ ಕೊಂಚ ಕುಸಿತ ಕಂಡಿದ್ದು, 3.23 ಲಕ್ಷ ಹೊಸ ಪ್ರಕರಣ ಪತ್ತೆ