ಮತ್ತೊಂದು ದಾಖಲೆ ಸೃಷ್ಟಿಸಿದ ಕೊರೊನಾ: ಒಂದೇ ದಿನಕ್ಕೆ 2 ಲಕ್ಷ ಮಂದಿಗೆ ಸೋಂಕು - BC Suddi
ಮತ್ತೊಂದು ದಾಖಲೆ ಸೃಷ್ಟಿಸಿದ ಕೊರೊನಾ: ಒಂದೇ ದಿನಕ್ಕೆ 2 ಲಕ್ಷ ಮಂದಿಗೆ ಸೋಂಕು

ಮತ್ತೊಂದು ದಾಖಲೆ ಸೃಷ್ಟಿಸಿದ ಕೊರೊನಾ: ಒಂದೇ ದಿನಕ್ಕೆ 2 ಲಕ್ಷ ಮಂದಿಗೆ ಸೋಂಕು

ನವದೆಹಲಿ : ಭಾರತದಲ್ಲಿ ಕೊರೊನಾ ಹರಡುವಿಕೆ ಎಲ್ಲವೂ ನಮ್ಮ ಕೈ ಮೀರಿ ಹೊರಟಿದೆ. ನಿನ್ನೆ ಬುಧವಾರ ಒಂದೇ ದಿನ ಸುಮಾರು 2ಲಕ್ಷ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಮಂಗಳವಾರ ಹೊಸದಾಗಿ 1,82,248 ಸಂಖ್ಯೆ ಸೋಂಕಿತರು ಪತ್ತೆಯಾಗಿದ್ದರು. ಆದರೆ ಬುಧವಾರ ಇದನ್ನು ಮೀರಿ 1,99,569 ದಾಖಲೆಯ ಪ್ರಕರಣಗಳು ಪತ್ತೆಯಾಗಿ, 1037 ಮಂದಿ ಬಲಿಯಾಗಿರುವುದು ದೇಶವನ್ನೇ ಚಿಂತೆಗೀಡುಮಾಡಿದೆ. ಈ ಮೂಲಕ ದೇಶದ ಒಟ್ಟು ಸೋಂಕಿತರ ಸಂಖ್ಯೆ 1,40,70,890ಕ್ಕೆ ತಲುಪಿದೆ. ಸಾವಿನ ಸಂಖ್ಯೆಯು 1,73,152ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಟ್ಟಾರೆ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 14,71,592ಕ್ಕೆ ಮುಟ್ಟಿದೆ. ಇದರಲ್ಲಿ 8944 ಸೋಂಕಿತರ ಪರಿಸ್ಥಿತಿ ಗಂಭೀರವಾಗಿದೆ.

ಲಸಿಕೆ ಕೊರತೆ ನೀಗಿಸುವ ಬದಲು ಪ್ರಧಾನಿಯಿಂದ ‘ಉತ್ಸವ’ ಎನ್ನುವ ಬೂಟಾಟಿಕೆ – ಕಾಂಗ್ರೆಸ್