ಬ್ರೇಕಿಂಗ್:1ರಿಂದ 9ನೇ ತರಗತಿಯವರೆಗೆ ಪರೀಕ್ಷೆ ಇಲ್ಲದೇ ಪಾಸ್ - BC Suddi
ಬ್ರೇಕಿಂಗ್:1ರಿಂದ 9ನೇ ತರಗತಿಯವರೆಗೆ ಪರೀಕ್ಷೆ ಇಲ್ಲದೇ ಪಾಸ್

ಬ್ರೇಕಿಂಗ್:1ರಿಂದ 9ನೇ ತರಗತಿಯವರೆಗೆ ಪರೀಕ್ಷೆ ಇಲ್ಲದೇ ಪಾಸ್

ಬೆಂಗಳೂರು: ಕೊರೊನಾ ಮಹಾಮಾರಿ ಹರಡುವಿಕೆ ಕೈ ಮೀರಿದೆ. ಈ ಹಿನ್ನೆಲೆಯಲ್ಲಿ ಒಂದರಿಂದ 9ನೇ ತರಗತಿಯವರೆಗೆ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ವಿಶ್ಲೇಷಣಾ ಮೌಲ್ಯಾಂಕನದ ಆಧಾರದಲ್ಲಿ ಮೂಲಕ ಉತ್ತೀರ್ಣ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ.

ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ, ಅಭ್ಯಾಸ ಗುಣಮಟ್ಟದ ಆಧಾರಿತವಾಗಿ ಮೌಲ್ಯಾಂಕ ನೀಡಲಾಗುತ್ತದೆ. ಈ ಮೂಲಕ ಆಯಾ ಶಾಲೆಗಳ ಶಿಕ್ಷಕರೇ ಈ ವಿಶ್ಲೇಷಣಾ ಮೌಲ್ಯಾಂಕನ ನೀಡಿ ಮುಂದಿನ ತರಗತಿಗಳಿಗೆ ಪಾಸ್ ಮಾಡಬೇಕಾಗುತ್ತದೆ.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಿಕ್ಷಣ ಇಲಾಖೆ ಹೇಳಿದೆ.