14 ನೇ ಆವೃತ್ತಿ IPL ಹಂಗಾಮ : ಮೊದಲ ಪಂದ್ಯದ ಮಾಹಿತಿ - BC Suddi
14 ನೇ ಆವೃತ್ತಿ IPL ಹಂಗಾಮ : ಮೊದಲ ಪಂದ್ಯದ ಮಾಹಿತಿ

14 ನೇ ಆವೃತ್ತಿ IPL ಹಂಗಾಮ : ಮೊದಲ ಪಂದ್ಯದ ಮಾಹಿತಿ

14ನೇ ಆವೃತ್ತಿಯ ಐಪಿಎಲ್ ಆಟಕ್ಕೆ ಕ್ಷಣಗಣನೆ ಆರಂಭವಾಗಿದೆ ಐಪಿಎಲ್ 2021ರ ಮೊದಲ ಪಂದ್ಯ ಏಪ್ರಿಲ್ 9ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಮುಖಾಮುಖಿಯಾಗಲಿದ್ದಾರೆ.

ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದು, ರೋಹಿತ್ ನಾಲ್ಕು ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಐಪಿಎಲ್ 13ನೇ ಆವೃತ್ತಿ ಯುಎಇ ನಡೆದಿತ್ತು. ಆದ್ರೆ ಕೊರೊನಾ ಮಧ್ಯೆಯೇ ಈ ಬಾರಿ ಭಾರತದಲ್ಲಿಯೇ ಪಂದ್ಯಗಳು ನಡೆಯುತ್ತಿವೆ.

ಶುಕ್ರವಾರ ರಾತ್ರಿ 7.30ಕ್ಕೆ ಆರ್ ಸಿ ಬಿ v/s ಮುಂಬೈ ಇಂಡಿಯನ್ಸ್ ಮಧ್ಯೆ ಪಂದ್ಯ ನಡೆಯಲಿದೆ. ಚೆನ್ನೈ ನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮೊದಲ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ನ ಡಿಜಿಟಲ್ ಪ್ಲಾಟ್ ಫಾರ್ಮ್ನಲ್ಲಿ ಐಪಿಎಲ್ 2021 ರ ಮೊದಲ ಪಂದ್ಯವನ್ನು ವೀಕ್ಷಿಸಬಹುದು.

error: Content is protected !!