ರಾಜ್ಯದಲ್ಲಿ 1,445 ಕೋವಿಡ್‌ ಹೊಸ ಪ್ರಕರಣಗಳು ದಾಖಲು - BC Suddi
ರಾಜ್ಯದಲ್ಲಿ 1,445 ಕೋವಿಡ್‌ ಹೊಸ ಪ್ರಕರಣಗಳು ದಾಖಲು

ರಾಜ್ಯದಲ್ಲಿ 1,445 ಕೋವಿಡ್‌ ಹೊಸ ಪ್ರಕರಣಗಳು ದಾಖಲು

ಬೆಂಗಳೂರು: ಸತತ ಏರುಗತಿಯಲ್ಲಿದ್ದ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಎರಡು ದಿನಗಳಿಂದ ಇಳಿಮುಖವಾಗಿವೆ. ಆದರೆ, ಸಾವಿಗೀಡಾದವರ ಸಂಖ್ಯೆ ಮತ್ತೆ ಎರಡಂಕಿ ತಲುಪಿದ್ದು, ಒಂದೇ ದಿನ ಹತ್ತು ಜನ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಸೋಮವಾರ ಹೊಸದಾಗಿ 1,445 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಭಾನುವಾರ 1,715 ಮಂದಿಗೆ ಸೋಂಕು ತಗುಲಿ, ಇಬ್ಬರು ಸಾವಿಗೀಡಾಗಿದ್ದರು. ಸೋಮವಾರ ಹೊಸ ಪ್ರಕರಣಗಳು 280 ಇಳಿಕೆಯಾಗಿದೆ. ಆದರೆ ಸಾವಿನ ಸಂಖ್ಯೆ ಎಂಟು ಹೆಚ್ಚಾಗಿದೆ. ಇನ್ನು ಭಾನುವಾರ ಒಂದು ಲಕ್ಷ ಪರೀಕ್ಷೆ ನಡೆಸಲಾಗಿತ್ತು. ಆದರೆ, ಮಾ.22ರಂದು 78 ಸಾವಿರ ಜನ ಮಾತ್ರ ಪರೀಕ್ಷೆಗೆ ಒಳಪಟ್ಟಿರುವುದು, ಹೊಸ ಪ್ರಕರಣಗಳ ಸಂಖ್ಯೆ ಇಳಿಯಲು ಕಾರಣವಾಗಿದೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 886, ಉಡುಪಿ 113, ಮೈಸೂರು 61, ತುಮಕೂರು ಮತ್ತು ಬೀದರ್ ತಲಾ 51, ದಕ್ಷಿಣ ಕನ್ನಡ 31, ಕಲಬುರ್ಗಿ 43 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು 4, ಉತ್ತರ ಕನ್ನಡ, ತುಮಕೂರು, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡದಲ್ಲಿ ತಲಾ ಒಂದು ಸಾವಾಗಿದೆ.

ಒಟ್ಟಾರೆ 9.71 ಲಕ್ಷ ಮಂದಿ ಕೋವಿಡ್‌ ಪೀಡಿತರಾಗಿದ್ದು, 9.44 ಲಕ್ಷ ಮಂದಿ ಕೋವಿಡ್‌ನಿಂದ ಮುಕ್ತರಾಗಿದ್ದಾರೆ. 12,444 ಸೋಂಕಿತರು ಸಾವಿಗೀಡಾಗಿದ್ದಾರೆ. 14,267 ಸೋಂಕಿತರು ಆಸ್ಪತ್ರೆ, ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಈ ಪೈಕಿ 136 ಮಂದಿ ಪರಿಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

error: Content is protected !!