ಕೊರೊನಾ ಕಂಟಕ : ದೇಶದಲ್ಲಿ 1,26,789 ಕೇಸ್ ಪತ್ತೆ - BC Suddi
ಕೊರೊನಾ ಕಂಟಕ : ದೇಶದಲ್ಲಿ 1,26,789 ಕೇಸ್ ಪತ್ತೆ

ಕೊರೊನಾ ಕಂಟಕ : ದೇಶದಲ್ಲಿ 1,26,789 ಕೇಸ್ ಪತ್ತೆ

ನವದೆಹಲಿ : ದೇಶದಲ್ಲಿ ಕೊರೊನಾ ಕಂಟಕ ಜನರ ನೆಮ್ಮದಿ ಕಸಿಯುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ದಾಖಲೆಯ 1.26 ಲಕ್ಷ ಜನರನ್ನು ಸೋಂಕು ದೃಢಪಟ್ಟಿದೆ. ಇದು ದೇಶದಲ್ಲಿ ಸೋಂಕು ಕಾಣಿಸಿಕೊಂಡ ನಂತರ ಯಾವುದೇ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಪ್ರಮಾಣವಾಗಿದೆ.

ಇನ್ನು ಕಳೆದ 24 ಗಂಟೆಗಳಲ್ಲಿ 685 ಮಂದಿ ಮಹಾಮಾರಿ ವೈರಸ್ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 1,66,862ಕ್ಕೆ ಏರಿಕೆಯಾಗಿದೆ. ಹೊಸ ಕೇಸ್ ಗಳು ಏರುಗತಿಯಲ್ಲಿರುವ ಕಾರಣ ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9,10,319ಕ್ಕೆ ತಲುಪಿದೆ.
ಒಂದೇ ದಿನ 1,26,789 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,29,28,574ಕ್ಕೆ ಏರಿಕೆಯಾಗಿದೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ 59,258 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ 1,18,51,393ಕ್ಕೆ ತಲುಪಿದೆ.

ಕೊರೊನಾ ಹಿನ್ನಲೆ : ಭಾರತದಿಂದ ನ್ಯೂಜಿಲೆಂಡ್‌ಗೆ ಬರುವವರಿಗೆ ತಾತ್ಕಾಲಿಕ ನಿರ್ಬಂಧ

error: Content is protected !!