10ಮೀ ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಭಾರತದ ದಿವ್ಯಾಂಶ್ ಸಿಂಗ್ ಪನ್ವಾರ್ - BC Suddi
10ಮೀ ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಭಾರತದ ದಿವ್ಯಾಂಶ್ ಸಿಂಗ್ ಪನ್ವಾರ್

10ಮೀ ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಭಾರತದ ದಿವ್ಯಾಂಶ್ ಸಿಂಗ್ ಪನ್ವಾರ್

ಐಎಸ್ ಎಸ್ ಎಫ್ ವಿಶ್ವಕಪ್ ನ ಉದ್ಘಾಟನಾ ದಿನವಾದ ಮಾ.19ರಂದು ನಡೆದ ಪುರುಷರ 10ಮೀ ಏರ್ ರೈಫಲ್ ಫೈನಲ್ ಗೆ ಟೋಕಿಯೊ ಒಲಿಂಪಿಕ್ಸ್ ಕೋಟಾದ ದಿವ್ಯಾಂಶ್ ಸಿಂಗ್ ಪನ್ವಾರ್ ಮತ್ತು ಅರ್ಜುನ್ ಬಬುಟಾ ಅವ್ರು ಅರ್ಹತೆ ಗಳಿಸಿದ್ದರು. ಐಎಸ್ ಎಸ್ ಎಫ್ ವಿಶ್ವಕಪ್’ನಲ್ಲಿ ಭಾರತದ ದಿವ್ಯಾಂಶ್ ಸಿಂಗ್ ಪನ್ವಾರ್ ಪುರುಷರ 10ಮೀ ಏರ್ ರೈಫಲ್ ವಿಭಾಗದಲ್ಲಿ ಕಂಚಿನ ಪದಕ ಪಡೆಯುವುದ್ರ ಮೂಲಕ ಭಾರತದ ಕೀರ್ತಿ ಪತಾಕೆಯನ್ನ ಹಾರಿಸಿದ್ದಾರೆ.

60 ಶಾಟ್’ಗಳ ಅರ್ಹತಾ ಪಂದ್ಯದಲ್ಲಿ 18 ವರ್ಷದ ಪನ್ವಾರ್ 629.1 ಅಂಕದೊಂದಿಗೆ ಆರನೇ ಸ್ಥಾನ ಪಡೆದ್ರೆ, 2019ರ ಐಎಸ್ ಎಸ್ ಎಫ್ ಕಿರಿಯರ ವಿಶ್ವಕಪ್ ಕಂಚಿನ ಪದಕ ವಿಜೇತೆ ಬಬುಟಾ ಅವರು ಕರ್ಣಿ ಸಿಂಗ್ ಶೂಟಿಂಗ್ ರೇಂಜ್’ನಲ್ಲಿ 621.8 ಗುಂಡು ಹಾರಿಸಿ ಮೂರನೇ ಸ್ಥಾನ ಪಡೆದಿದ್ದರು. ಅರ್ಹತಾ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ತಯ್ಯುನ್ ನಾಮ್ 631.1 ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಇಸ್ರೇಲ್ ನ ಸೆರ್ಗಿ ರಿಕ್ಟರ್ 631.8 ಅಂಕದೊಂದಿಗೆ ಎರಡನೇ ಸ್ಥಾನ ಗಳಿಸಿದ್ದರು. ಇವರು ಜೈಪುರ ಮೂಲದ ಪನ್ವಾರ್ ತಮ್ಮ 12ನೇ ವಯಸ್ಸಿನಿಂದ್ಲೇ ದೆಹಲಿಯ ದೀಪಕ್ ಕುಮಾರ್ ನೇತೃತ್ವದಲ್ಲಿ ತರಬೇತಿ ಪಡೆದಿದ್ದರು.

2019ರ ಏಪ್ರಿಲ್ ನಲ್ಲಿ ಬೀಜಿಂಗ್ ಒಲಿಂಪಿಕ್ ವಿಶ್ವ ಕಪ್’ನಲ್ಲಿ ನಡೆದ 10ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ದಿವ್ಯಾಂಶ್ ಬೆಳ್ಳಿ ಪದಕ ಪಡೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಇಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್ ನಲ್ಲಿ ಪುರುಷರ 10ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ತಮ್ಮ ಅಧಿಕಾರ ಮುದ್ರೆ ಒತ್ತಿದ ವಿಶ್ವ ನಂ.1 ದಿವ್ಯಾಂಶ್, ಟೋಕಿಯೊ ಗೇಮ್ಸ್ ನಲ್ಲಿ ಶೂಟಿಂಗ್’ನಲ್ಲಿ ಭಾರತದ ಪದಕದ ಭರವಸೆ ಹೊಂದಿದ್ದರು. ಸಧ್ಯ ಇವ್ರು ಕಂಚಿನ ಪದಕ ಪಡೆಯುವುದ್ರಲ್ಲಿ ಸಫಲವಾಗಿದ್ದಾರೆ.

 

error: Content is protected !!