ಧಾರವಾಡ: ಮುಷ್ಕರ ಮಧ್ಯೆಯೂ 104 ಬಸ್‌ಗಳ ಕಾರ್ಯಾರಂಭ: 15 ಸಿಬ್ಬಂದಿ ವಜಾ - BC Suddi
ಧಾರವಾಡ: ಮುಷ್ಕರ ಮಧ್ಯೆಯೂ 104 ಬಸ್‌ಗಳ ಕಾರ್ಯಾರಂಭ: 15 ಸಿಬ್ಬಂದಿ ವಜಾ

ಧಾರವಾಡ: ಮುಷ್ಕರ ಮಧ್ಯೆಯೂ 104 ಬಸ್‌ಗಳ ಕಾರ್ಯಾರಂಭ: 15 ಸಿಬ್ಬಂದಿ ವಜಾ

ಧಾರವಾಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದವರು ಏ.7ರಿಂದ ಅನಿರ್ದಿಷ್ಟ ಕಾಲದವರೆಗೆ ಮುಷ್ಕರ ನಡೆಸುತ್ತಿದ್ದಾರೆ. ಈ ಮುಷ್ಕರದ ಮಧ್ಯೆಯೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ ಗ್ರಾಮಾಂತರ ವಿಭಾಗವು 104 ಬಸ್‌ಗಳ ಸಂಚಾರ ನಡೆಸಿದೆ.

ಧಾರವಾಡ ಗ್ರಾಮಾಂತರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಸವದತ್ತಿ, ಹಳಿಯಾಳ, ದಾಂಡೇಲಿ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರೀಕ್ಷಾರ್ಥ ಸೇವೆಯಲ್ಲಿರುವ 14 ಚಾಲನಾ ಸಿಬ್ಬಂದಿ, 1 ತಾಂತ್ರಿಕ ಸಿಬ್ಬಂದಿ ಅವರುಗಳ ಪರೀಕ್ಷಾರ್ಥ ಅವಧಿಯಲ್ಲಿಯ ಅಸರ್ಮಪಕ ಸೇವೆಯನ್ನು ಪರಿಗಣಿಸಿ ಅವರುಗಳನ್ನು ಏ.20 ರಿಂದ ಸಂಸ್ಥೆಯ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಮುಂದುವರೆದ ಮುಷ್ಕರ ಮಧ್ಯೆಯೂ ಸಹ ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗಲು ಧಾರವಾಡ ವಿಭಾಗದಿಂದ ಇಂದು (ಏ.21) ಸಂಜೆ 5 ಗಂಟೆವರೆಗೆ 104 ಬಸ್ಸಗಳು ಸಂಚರಿಸಿವೆ. ಇದರಲ್ಲಿ ಧಾರವಾಡ ಘಟಕದಿಂದ 47, ಸವದತ್ತಿ ಘಟಕದಿಂದ 22, ಹಳಿಯಾಳ ಘಟಕದಿಂದ 15 ಹಾಗೂ ದಾಂಡೇಲಿ ಘಟಕದಿಂದ 20 ವಾಹನಗಳು ಸಂಚರಿಸಿವೆ ಎಂದು ಧಾರವಾಡ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಸಲಿಂಗಪ್ಪ ಬೀಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಗೋಹತ್ಯೆ ನಿಷೇಧ : ರಾಜ್ಯದಲ್ಲಿ 60 ದಿನಗಳಲ್ಲಿ 58 ಪ್ರಕರಣಗಳು ದಾಖಲು