ಕುಂಭ ಮೇಳದಲ್ಲಿಲ್ಲ ಕೊರೊನಾ ಭೀತಿ: ಇದುವರೆಗೆ 10 ಲಕ್ಷ ಜನ ಭಾಗಿ - BC Suddi
ಕುಂಭ ಮೇಳದಲ್ಲಿಲ್ಲ ಕೊರೊನಾ ಭೀತಿ: ಇದುವರೆಗೆ 10 ಲಕ್ಷ ಜನ ಭಾಗಿ

ಕುಂಭ ಮೇಳದಲ್ಲಿಲ್ಲ ಕೊರೊನಾ ಭೀತಿ: ಇದುವರೆಗೆ 10 ಲಕ್ಷ ಜನ ಭಾಗಿ

ಹರಿದ್ವಾರ: ಕೊರೊನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆ ಕುಂಭ ಮೇಳವನ್ನು ಅವಧಿಗೂ ಮುನ್ನವೇ ಪೂರ್ಣಗೊಳಿಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಮುಖಂಡರ ಜತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹರಿದ್ವಾರದ ಜಿಲ್ಲಾಧಿಕಾರಿ ದೀಪಕ್‌ ರಾವತ್‌ ಹೇಳಿದ್ದಾರೆ. ಕುಂಭಮೇಳವನ್ನು ಅವಧಿಗೆ ಮೊದಲೇ ಪೂರ್ಣಗೊಳಿಸಲು ಸರಕಾರ, ವಿವಿಧ ಅಖಾಡಗಳ ಜತೆ ಮಾತುಕತೆ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಇದಕ್ಕೂ ಮೊದಲು ಕುಂಭಮೇಳದ ಮೊದಲ ಘಟ್ಟ ಮಂಗಳವಾರ ಅಂತ್ಯಗೊಂಡಿದೆ. ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಶಾಹಿ ಸ್ನಾನ ಮಾಡಿದ್ದಾರೆ. ನಿಗದಿಯಂತೆ ಏಪ್ರಿಲ್‌ 30ರವರೆಗೆ ಮೇಳ ಮುಂದುವರಿಯಲಿದೆ. ಈ ಮಧ್ಯೆ ಉತ್ತರಾಖಂಡ ಸಿಎಂ ತೀರಥ್‌ ಸಿಂಗ್‌ ರಾವತ್‌ ಅವರು, ಜನರ ಆರೋಗ್ಯ ಮುಖ್ಯ. ಆದರೆ ಅವರ ಧಾರ್ಮಿಕ ನಂಬಿಕೆಗಳನ್ನು ಕಡೆಗಣಿಸಬಾರದು. ಹಾಗೂ ಕಳೆದ ವರ್ಷ ನಡೆದಿದ್ದ ದೆಹಲಿಯ ನಿಝಾಮುದ್ದೀನ್ ಮರ್ಕಜ್ ಗೂ ಕುಂಭ ಮೇಳಕ್ಕೂ ಹೋಲಿಕೆ ಸರಿಯಲ್ಲ. ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಕುಂಭಮೇಳ ನಡೆಯುತ್ತಿದೆ. ಎಂದು ಹೇಳಿದ್ದಾರೆ.