ವೈನ್ ಗಾಗಿ ಇಲ್ಲೊಬ್ಬ ಮಹಿಳೆ ಗಾಗಿ  1.6 ಲಕ್ಷ ಕಳಕೊಂಡ್ರು.! - BC Suddi
ವೈನ್ ಗಾಗಿ ಇಲ್ಲೊಬ್ಬ ಮಹಿಳೆ ಗಾಗಿ  1.6 ಲಕ್ಷ ಕಳಕೊಂಡ್ರು.!

ವೈನ್ ಗಾಗಿ ಇಲ್ಲೊಬ್ಬ ಮಹಿಳೆ ಗಾಗಿ  1.6 ಲಕ್ಷ ಕಳಕೊಂಡ್ರು.!

 

ಬೆಂಗಳೂರು: ಆನ್​ಲೈನ್ ಮೂಲಕ ಮದ್ಯ ತರಿಸಿಕೊಳ್ಳಲು ಯತ್ನಿಸಿದ ಅಂಚಲ್ ಖಂಡೇವಾಲ್ ಎಂಬಾಕೆ ಬರೋಬ್ಬರಿ 1.6 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ವೈಟ್​ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈನ್ ಖರೀದಿಸಲೆಂದು ಆನ್‌ಲೈನ್‌ ಮೂಲಕ ರಣ್​ವೀರ್ ಸಿಂಗ್ ಎಂಬಾತನನ್ನ ಅಂಚಲ್​ ಸಂಪರ್ಕಿಸಿದ್ದಳು. ವೈನ್ ಕಳಿಸಿಕೊಡಲು ಮುಂಗಡ ಹಣ ಕೇಳಿದ್ದ ರಣ್​ವೀರ್, ಕ್ಯೂ ಆರ್ ಕೋಡ್ ಕಳಿಸಿ‌ ಹಣ ಪಾವತಿಸುವಂತೆ ಸೂಚಿಸಿದ್ದ.

ವೈನ್​ ಸಿಗುವ ಖುಷಿಯಲ್ಲೇ ಮಹಿಳೆಯೂ ಹಣ ಕಳಿಸಿದ್ದಳು. ಹಣ ತಲುಪಿಲ್ಲವೆಂದು ಒಟ್ಟು 5 ಬಾರಿ ಮಹಿಳೆಯಿಂದ ವಿವಿಧ ಹೆಸರಿನಲ್ಲಿ ರಣ್​ವೀರ್ ಪೇಮೆಂಟ್ ಮಾಡಿಸಿಕೊಂಡಿದ್ದ. ಅನುಮಾ‌ನಗೊಂಡು ಪರಿಶೀಲಿಸಿದಾಗ ಆಕೆಯ ಖಾತೆಯಿಂದ 1.6 ಲಕ್ಷ ರೂ. ಡೆಬಿಟ್ ಆಗಿದ್ದು, ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡಾಕೆ ವೈಟ್​ಫೀಲ್ಡ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.!

 

error: Content is protected !!