ಐಸಿಯು ಬೆಡ್‌ಗಾಗಿ ಕೊರೊನಾ ಸೋಂಕಿತನಿಂದ 1.50 ಲಕ್ಷ ಬಿಲ್.!- ವೈದ್ಯ ಅರೆಸ್ಟ್ - BC Suddi
ಐಸಿಯು ಬೆಡ್‌ಗಾಗಿ ಕೊರೊನಾ ಸೋಂಕಿತನಿಂದ 1.50 ಲಕ್ಷ ಬಿಲ್.!- ವೈದ್ಯ ಅರೆಸ್ಟ್

ಐಸಿಯು ಬೆಡ್‌ಗಾಗಿ ಕೊರೊನಾ ಸೋಂಕಿತನಿಂದ 1.50 ಲಕ್ಷ ಬಿಲ್.!- ವೈದ್ಯ ಅರೆಸ್ಟ್

ಮುಂಬೈ: ಐಸಿಯು ಬೆಡ್‌ ನೀಡಲು ಕೊರೊನಾ ಸೋಂಕಿತ ರೋಗಿಯಿಂದ 1.50 ಲಕ್ಷ ರೂ. ತೆಗೆದುಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಥಾಣೆಯ ಕೋವಿಡ್-19 ಆರೈಕೆ ಕೇಂದ್ರದ ಐವರು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

“ಈ ಪ್ರಕರಣ ಸಂಬಂಧ ಐವರು ವೈದ್ಯರಲ್ಲಿ ಒಬ್ಬನನ್ನು ಬಂಧಿಸಿದ್ದೇವೆ. ಮೋಸದ ಭಾಗವಾಗಿದ್ದ ಇತರ ವೈದ್ಯರನ್ನು ಬಂಧಿಸಲು ಹೆಚ್ಚಿನ ಶೋಧ ನಡೆಯುತ್ತಿದೆ” ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.