ಅಫ್ಘಾನಿಸ್ತಾನ: ರಾಜಧಾನಿ ಕಾಬೂಲ್‌ನಲ್ಲಿ ಉಗ್ರರ ದಾಳಿ ನಡೆದಿದೆ. ವಿದೇಶಿ ಅತಿಥಿಗಳು ತಂಗುತ್ತಿದ್ದ ಹೋಟೆಲ್‌ನಲ್ಲಿ ಭಾರೀ ಸ್ಫೋಟ ಸಂಭವಿಸಿದೆ. !ಚೀನಾದ ಹೆಚ್ಚಿನ ಅಧಿಕಾರಿಗಳು ಇಲ್ಲಿಯೇ ಇರುತ್ತಿದ್ದರು ಎಂದು ತಿಳಿದುಬಂದಿದೆ.
ಸ್ಫೋಟದ ಬಳಿಕ ಹೋಟೆಲ್‌ನಲ್ಲೂ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ, ಆದರೆ, ಸ್ಫೋಟವು ತುಂಬಾ ಪ್ರಬಲವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ತಾಲಿಬಾನ್ ಸರ್ಕಾರ ಕೂಡ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.\
( ಸಾಂದರ್ಭಿಕ ಚಿತ್ರ)