ಬೆಂಗಳೂರು: ಪ್ರಭಾವಿಗಳನ್ನು ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ಸುಂದರಿ ಸದ್ಯ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹೌದು ತನ್ನ ಸುಂದರ ಮೈಮಾಟದಿಂದ ಹೈಪ್ರೊಫೈಲ್ ವ್ಯಕ್ತಿಗಳನ್ನು ಖೆಡ್ಡಾಗೆ ಬೀಳಿಸುತ್ತಿದ್ದ ಯುವತಿ ಅರೆಸ್ಟ್‌ ಆಗಿದ್ದು, ಈಕೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ ಜೊತೆ ನಿಕಟ ಸಂಪರ್ಕ ಹೊಂದಿದ್ದಳೆಂಬ ಮಾಹಿತಿ ಲಭ್ಯವಾಗಿದೆ.

ಹೌದು ಐಎಎಸ್, ಐಪಿಎಸ್, ಐಎಫ್ ಎಸ್ ಅಧಿಕಾರ ಟಾರ್ಗೆಟ್ ಮಾಡುತ್ತಿದ್ದ ಸುಂದರಿ, ವಿದ್ಯಾ ಮೈಮಾಟಕ್ಕೆ ಅನೇಕರು ಮಾರುಹೋಗಿದ್ದಾರೆ. ಇನ್ನು ಈ ಯುವತಿ ಎಐಸಿಸಿ(AICC) ಸದಸ್ಯೆಯಾಗಿದ್ದು, ತಮಿಳುನಾಡಿನ ಕಾಂಗ್ರೆಸ್ ಇನ್ಚಾರ್ಜ್ ಆಗಿದ್ದಾರೆ. ಗಣ್ಯರಿಗೇ ಗಾಳ ಹಾಕುತ್ತಿದ್ದ ವಿದ್ಯಾ ಅವರುಗಳ ಜೊತೆ ಸ್ನೇಹ ಗಳಿಸಿ ಸಂಭಂದ ಬೆಳೆಸುತ್ತಿದ್ದಳು. ಬಳಿಕ ಫೋಟೋ, ವಿಡಿಯೋ ಇದೆ ಎಂದು ಹೆದರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದಳು.

ಆಯುಧ ಪೂಜೆ ಹಿನ್ನೆಲೆ ಮಗನ ಕಂಪನಿಯ ಕಾರ್ಮಿಕರಿಗೆ ಬೋನಸ್ ಹಂಚಿದ ಸಿಎಂ

ಇದೇ ರೀತಿ ನಗರದ ಸಿವಿಲ್ ಕಾಂಟ್ರಾಕ್ಟರ್ ಒಬ್ಬರ ಜೊತೆ ಸಲುಗೆ ಬೆಳಸಿದ್ದ ವಿದ್ಯಾ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಆದರೆ ಕಾಂಟ್ರಾಕ್ಟರ್ ಅನ್ನಪೂರ್ಣೇಶ್ವರಿ ನಗರ ಪೊಲೀಸರ ಮೊರೆ ಹೋಗಿದ್ದಾರೆ. ಕೇಸ್ ದಾಖಲಿಸಿದ ಪೊಲೀಸರು ಆದರೀಗ ಕೊನೆಗೂ ಐಎಎಸ್, ಐಪಿಎಸ್, ಐಎಫ್ ಎಸ್, ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ಗಾಳಾ ಹಾಕುತ್ತಿದ್ದ ಈ ಮಹಿಳೆಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ವಿದ್ಯಾಳನ್ನು ಬಂಧಿಸಿ ವಿಚಾರಣೆ ವೇಳೆ ಆಕೆಯ ಕತರ್ನಾಕ್ ಹಿಸ್ಟರಿ ಬಯಲಿಗೆ ಬಂದಿದೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.