ನವದೆಹಲಿ: ದೋಷಪೂರಿತ ಸಿಮ್ಯುಲೇಟರ್‌ನಲ್ಲಿ 737 ಮ್ಯಾಕ್ಸ್ ವಿಮಾನದ ಪೈಲಟ್‌ಗಳಿಗೆ ತರಬೇತಿ ನೀಡಿದ್ದಕ್ಕಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸೋಮವಾರ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್‌ಗೆ  10 ಲಕ್ಷ ದಂಡ ವಿಧಿಸಿದೆ.

ಈ ಹಿಂದೆ, ಡಿಜಿಸಿಎ 90 ಸ್ಪೈಸ್‌ಜೆಟ್ ಪೈಲಟ್‌ಗಳು B737 ಮ್ಯಾಕ್ಸ್ ವಿಮಾನವನ್ನು ಹಾರಿಸುವುದನ್ನು ನಿರ್ಬಂಧಿಸಿತ್ತು. ಪೈಲಟ್‌ಗಳಿಗೆ ಮರು ತರಬೇತಿ ನೀಡಬೇಕು ಎಂದು ಆದೇಶಿಸಿತ್ತು. ವಿಮಾನವು ವಾಯು ಮಾರ್ಗದಲ್ಲಿ ಸ್ಥಗಿತಗೊಂಡಾಗ, ಪೈಲಟ್‌ಗಳ ತರಬೇತಿಯಲ್ಲಿ ದೋಷವಿರುವುದು ಪತ್ತೆಯಾಯಿತು. ಈ ಸಂಬಂಧ ಏಪ್ರಿಲ್‌ನಲ್ಲಿ ಸ್ಪೈಸ್ ಜೆಟ್ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ವಿಮಾನಯಾನ ಸಂಸ್ಥೆಯ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲದ ಕಾರಣಕ್ಕೆ ಡಿಜಿಸಿಎ ಪೈಲಟ್‌ಗಳಿಗೆ ನಿರ್ಬಂಧ ಹೇರಿ, ಸಂಸ್ಥೆಗೆ ದಂಡ ವಿಧಿಸಿದೆ.